Asianet Suvarna News Asianet Suvarna News

ಬೆಂಗಳೂರು ಉಸ್ತುವಾರಿ ಗಲಾಟೆ ಹೈ ಕಮಾಂಡ್ ಅಂಗಳಕ್ಕೆ, ಅಶೋಕ್‌ಗೆ ಕೈ ತಪ್ಪುವ ಸಾಧ್ಯತೆ.?

Oct 17, 2021, 12:32 PM IST

ಬೆಂಗಳೂರು (ಅ. 17): ರಾಜಧಾನಿ ಉಸ್ತುವಾರಿ ಗಲಾಟೆ ಮತ್ತೆ ಜೋರಾಗಿದೆ. ಆರ್. ಅಶೋಕ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿದೆ. ಬಿ ಎಲ್ ಸಂತೋಷ್‌ರನ್ನು ಭೇಟಿ ಮಾಡಿ ಕೆಲಸ ಶಾಸಕರು ಅಶೋಕ್ ಹಸ್ತಕ್ಷೇಪದ ಬಗ್ಗೆ ದೂರು ಕೊಟ್ಟಿದ್ದಾರೆ. 

'ಎಲ್ಲವೂ ನನ್ನ ಗಮನಕ್ಕೆ ಬಂದಿದೆ. ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ಬೆಂಗಳೂರು ಉಸ್ತುವಾರಿ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಬಿ ಎಲ್ ಸಂತೋಷ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.