'ನಾನು ಹೇಳಿದ್ದು ತಪ್ಪು ಅನ್ನೋಕೆ ಪ್ರತಾಪ್ ಸಿಂಹ ಆರ್ಥಿಕ ತಜ್ಞನೇನ್ರಿ.? ಸಿದ್ದರಾಮಯ್ಯ
ತಾಲೂಕು ಕೋರ್ಟಲ್ಲಿ ವಕೀಲಿಕೆ ಮಾಡುತ್ತಿದ್ದ ಪ್ರತಿಪಕ್ಷ ನಾಯಕಗೆ ಅರ್ಥಶಾಸ್ತ್ರದ ಬಗ್ಗೆ ಏನು ಗೊತ್ತು? ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜೂ. 06): ತಾಲೂಕು ಕೋರ್ಟಲ್ಲಿ ವಕೀಲಿಕೆ ಮಾಡುತ್ತಿದ್ದ ಪ್ರತಿಪಕ್ಷ ನಾಯಕಗೆ ಅರ್ಥಶಾಸ್ತ್ರದ ಬಗ್ಗೆ ಏನು ಗೊತ್ತು? ಎಂಬ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿಕೆಗೆ ಸಿದ್ದರಾಮಯ್ಯ (Siddaramaiah) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣಕಾಸು ವಿಚಾರದ ಬಗ್ಗೆ ಗೊತ್ತಿಲ್ಲದೆ 13 ಬಜೆಟ್ ಮಂಡಿಸಿದ್ದೇನೆಯೇ? ಹಣಕಾಸು ಬಗ್ಗೆ ಇವನಿಗೆ ಏನು ಗೊತ್ತು? ನಾನು ಓದಿದ ಲಾ ಪ್ರಶ್ನಿಸಲು ಪ್ರತಾಪ್ ಸಿಂಹ ವಕೀಲನಾ..? ಎಂದು ತಿರುಗೇಟು ನೀಡಿದ್ದಾರೆ.
ಸುಮ್ಮನೆ ಕಥೆ ಹೇಳಿಕೊಂಡು ತಿರುಗುತ್ತಾರೆ. ಮೈಸೂರಿಗೆ ಇವರೇನು ಮಾಡಿದ್ದಾರೆ..? ಇವೆಲ್ಲದರ ಬಗ್ಗೆ ಚರ್ಚೆ ಮಾಡಲಿ, ನಾನು ಸಿದ್ದನಿದ್ಧೇನೆ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.