CCTVs in Sick: ಚಿತ್ರದುರ್ಗ ಜಿಲ್ಲಾಸ್ಪತ್ರೆ ಸಿಸಿಟಿವಿಗೆ ರೋಗ!

ಚಿತ್ರದುರ್ಗ(ಡಿ.14) ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ  ಸಿಸಿಟಿವಿಗಳಿಗೆ ರೋಗ ಬಡಿದ ಪರಿಣಾಮ, ಕಳ್ಳ-ಖದೀಮರ ಹಾವಳಿ ಹೆಚ್ಚಾಗಿದ್ದು ರೋಗಿಗಳ ಸಂಬಂಧಿಕರು ನರಳಾಡ್ತಿದ್ದಾರೆ. ಆಸ್ಪತ್ರೆ ಮುಂದೆ  ಕಳೆದ ಒಂದು ತಿಂಗಳಿಂದಲೂ ನಿಲ್ಲಿಸಿದ್ದ 5 ಕ್ಕೂ ಅಧಿಕ ಬೈಕ್ ಗಳು ಕಳವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಸಿಸಿಟಿವಿ ಸರಿಯಾಗಿ ಕೆಲಸ ಮಾಡದೇ ಇರುವುದು ಕಳ್ಳ ಖದೀಮರಿಗೆ ಎಡೆ ಮಾಡಿಕೊಟ್ಟಂತಾಗಿದೆ. ಬೈಕ್ ಗಳು ಕಳವಾಗುವುದರ ಜೊತೆಗೆ ಹೆಚ್ಚಾಗಿ ಜಿಲ್ಲಾಸ್ಪತ್ರೆಗೆ ಬಡವರು ಬರುತ್ತಾರೆ. ಎಷ್ಟೋ‌ ಜನರ ಮೋಬೈಲ್ ಹಾಗೂ ಹಣವನ್ನು ಕಳ್ಳರು ಕದ್ದು ಪರಾರಿ ಆಗಿದ್ದಾರೆ. ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡದ ಕಾರಣ ಬಡವರು ಹೈರಾಣಾಗಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು ಎಂದು ಜಿಲ್ಲಾಸ್ಪತ್ರೆ ಮುಂದೆ  ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

Share this Video
  • FB
  • Linkdin
  • Whatsapp

Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ ನಮಸ್ಕಾರ ಮಾಡಿಕೊಂಡ! ವಿಡಿಯೋ

Related Video