Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ ನಮಸ್ಕಾರ ಮಾಡಿಕೊಂಡ! ವಿಡಿಯೋ
* ಹನುಮಾನ್ ದೇವಾಲಯಕ್ಕೆ ನುಗ್ಗಿ ಹುಂಡಿ ಕದ್ದೊಯ್ದ
* ಕಳ್ಳತನಕ್ಕೂ ಮುನ್ನ ದೇವರಿಗೆ ನಮಿಸಿದ
* ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗುತ್ತಿರುವ ವಿಡಿಯೋ
* ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು
ಥಾಣೆ (ನ. 15) ಇದೊಂದು ವಿಚಿತ್ರ ಪ್ರಕರಣ. ಕಳ್ಳನೊಬ್ಬ ದೇವಾಲಯದ ಕಾಣಿಕೆ ಹುಂಡಿಯನ್ನು (Robbery) ಎತ್ತಿಕೊಂಡು ಹೋಗಿದ್ದಾನೆ. ಆತನ ಕೃತ್ಯ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದೆ. ದೇವಾಲಯದ (Temple) ಗುಡಿ ಒಳಕ್ಕೆ ನುಗ್ಗಿದ ಕಳ್ಳ ಅತ್ತಿತ್ತ ನೋಡಿದ್ದಾನೆ. ದೇವರಿಗೆ ಪ್ರಾರ್ಥನೆ ಮಾಡಿ ನಮಸ್ಕರಿಸಿ ಕಾಣಿಕೆ ಹುಂಡಿಗೆ ಕೈ ಹಾಕಿದ್ದಾನೆ. ನನ್ನನ್ನು ಕ್ಷಮಿಸುಬಿಡು ದೇವರೇ ಎಂದು ಕೇಳಿಕೊಂಡಿರಬಹುದು!
ಥಾಣೆಯ (Thane) ಹನುಮಾನ್ ದೇವಾಲಯದಲ್ಲಿ ಈ ಘಟನೆ ನಡೆದಿದೆ. ನವೆಂಬರ್ 9 ರ ರಾತ್ರಿ ಮುಂಬೈ (Mumbai)ಬಳಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖೋಪಾಟ್ ಪ್ರದೇಶದಲ್ಲಿ ನೆಲೆಗೊಂಡಿರುವ ಭಗವಾನ್ ಹನುಮಾನ್ ದೇವಾಲಯಕ್ಕೆ (Hanuman Temple) ನುಗ್ಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳ ದೇವರ ಪೋಟೋ ತೆಗೆದುಕೊಂಡಿರುವುದು ಕಂಡು ಬಂದಿದೆ. ಸುತ್ತ ಮುತ್ತ ಯಾರೂ ಇಲ್ಲದನ್ನು ನೋಡಿ ಕಾಣಿಕೆ ಹುಂಡಿಗೆ ಕೈ ಹಾಕಿದ್ದಾನೆ.
ಚಲಿಸುತ್ತಿದ್ದ ರೈಲಿನಲ್ಲಿ ದೊಡ್ಡ ದರೋಡೆ, ಯುವತಿ ಮೇಲೆ ಗ್ಯಾಂಗ್ ರೇಪ್
ಪ್ರಾರ್ಥನೆ ಮಾಡಿ ದೇವರಿಗೆ ನಮಿಸುವಂತೆ ನಟಿಸಿ ಏಕಾಏಕಿ ಕಾಣಿಗೆ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಗೌರವ ಮತ್ತು ಭಕ್ತಿಯ ಸಂಕೇತವಾಗಿ ಹನುಮಾನ್ ವಿಗ್ರಹದ ಪಾದಗಳನ್ನು ಮುಟ್ಟುತ್ತಾನೆ. ಸ್ವಲ್ಪ ಸಮಯದ ನಂತರ ದೇವರ ಮುಂದೆ ಇಟ್ಟಿದ್ದ ಕಾಣಿಕೆ ಪೆಟ್ಟಿಗೆಯನ್ನು ಎತ್ತಿಕೊಂಡು ತರಾತುರಿಯಲ್ಲಿ ಅಲ್ಲಿಂದ ಕಾಲು ಕೀಳುತ್ತಾನೆ.
ಮಾಹಿತಿ ಆಧರಿಸಿ ಕಾರ್ಯ ನಿರತಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಕಾಣಿಕೆ ಹಣ ಅದರಲ್ಲಿ ಇತ್ತು ಎಂದು ತಿಳಿಸಿದ ದೇವಾಲಯದ ಮಂಡಳಿ ಪೊಲೀಸರಿಗೆ ವಿಚಾರ ತಿಳಿಸಿದೆ. ಶನಿವಾರ ಆರೋಪಿಯನ್ನು ಬಂಧಿಸಿ ಕಳ್ಳತನ ಮಾಡಿದ್ದ ಹಣವನ್ನು ಆತನಿಒಂದ ಜಪ್ತಿ ಮಾಡಿಕೊಳ್ಳಲಾಗಿದೆ.
ಕಳ್ಳತನ ಮಾಡಿ ನಿದ್ರೆಗೆ ಜಾರಿದ್ದ; ತಿಂಗಳ ಹಿಂದೆ ತಮಿಳುನಾಡಿನಿಂದ ಇಂಥದ್ದೇ ಒಂದು ಪ್ರಕರಣ ವರದಿಯಾಗಿತ್ತು. ಮನೆಯೊಂದನ್ನು ದರೋಡೆ ಮಾಡಿದ್ದ ಕಳ್ಳ ಕದ್ದ ವಸ್ತುಗಳೊಂದಿಗೆ ಅದೆ ಮನೆಯ ಟೆರೆಸ್ ನಲ್ಲಿ ನಿದ್ದೆಗೆ ಜಾರಿದ್ದ. ಬೆಳಗ್ಗಿನ ವ್ಯಾಯಾಮಕ್ಕೆಂದು ಮನೆ ಮಾಲೀಕ ಟೆರೆಸ್ ಏರಿದಾಗ ಗೊರಕೆ ಹೊಡೆಯುತ್ತಿದ್ದವನ ಪಕ್ಕದಲ್ಲಿ ಒಂದು ಬ್ಯಾಗ್ ಇರುವುದು ಕಂಡಿದೆ. ಬ್ಯಾಗ್ ತೆರೆದು ನೋಡಿದಾಗ ತಮ್ಮ ಮನೆಯ ವಸ್ತುಗಳೆ ಕಂಡಿವೆ. ನಿಧಾನಕ್ಕೆ ಕೆಲಕ್ಕೆ ಬಂದ ಮನೆ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ಬಂದು ಎಚ್ಚರಿಸುವವರೆಗೂ ಕಳ್ಳ ನಿದ್ದೆ ಮಾಡುತ್ತಲೇ ಇದ್ದ.
ನಾಲ್ಕು ಕೋಟಿ ರೂ. ತಂಡ; ಬರೋಬ್ಬರಿ ನಾಲ್ಕು ಕೋಟಿ ರೂ. ಮೊತ್ತದ ಚಿನ್ನಾಭರಣ ದೋಚಿದ್ದ ಗ್ಯಾಂಗ್ ಗಂಟು-ಮೂಟೆ ಕಟ್ಟಿಕೊಂಡು ಪರಾರಿಯಾಗಲು ಹೊರಟಿತ್ತು. ಆದರೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿತ್ತು. ಲೂಟಿ ಮಾಡಿ ಗಂಟು-ಮೂಟೆ ಕಟ್ಟುತ್ತಿರುವಾಗಲೇ ಲಾಕ್ ಆಗಿದ್ದರು.
ಆಗಸ್ಟ್ 21 ರ ರಾತ್ರಿ ನೇಪಾಳಿ ಗ್ಯಾಂಗ್ ನಿಂದ ಕಳ್ಳತನಕ್ಕೆ ಯತ್ನ ನಡೆದಿತ್ತು. ಸುಬ್ಬಯ್ಯಪಾಳ್ಯದ ಮುತ್ತೂಟ್ ಫೈನಾನ್ಸ್ ಶೆಟರ್ ಒಡೆದು ಶಾಪ್ ನೊಳಕ್ಕೆ ಎಂಟ್ರಿ ಕೊಟ್ಟ ಖದೀಮರು 4 ಕೋಟಿ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ. ಮುತ್ತೂಟ್ ಫೈನಾನ್ಸ್ ಶಾಖೆಯ ಶೆಟರ್ ಅನ್ನು ಮೀಟಿ ಒಳಗೆ ನುಗ್ಗಿ 4 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಲಾಕರ್ ಅನ್ನು ಒಡೆಯಲು ಯತ್ನಿಸುತ್ತಿದ್ದರು. ಲಾಕರ್ ಬಳಿ ಸೆನ್ಸಾರ್ ಅಳವಡಿದ್ದರಿಂದ ಸೆಕ್ಯುರಿಟಿ ಗಾರ್ಡ್‍ಗಳು ಒಳಗೆ ಹೋಗಿ ಲಾಕರ್ ಒಡೆಯುತ್ತಿದ್ದ ಸಂದರ್ಭದಲ್ಲಿ ಫೈನಾನ್ಸ್ ಕಂಪೆನಿಯವರಿಗೆ ಅಲಾರಾಂ ಬಡಿದುಕೊಂಡಿದೆ. ಇದನ್ನು ಅರಿತ ಸಿಬ್ಬಂದಿ ತಕ್ಷಣ ಬಾಣಸವಾಡಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪರಿಣಾಮ ಕಳ್ಳರು ಆಭರಣದ ಅಂಗಡಿಯಿಂದ ನೇರವಾಗಿ ಜೈಲು ಸೇರಿದ್ದರು.