ಬರಗಾಲ ಬರಲಿ ಅಂತಾ ರೈತರು ಕಾಯ್ತಿದ್ದಾರೆ: ಶಿವಾನಂದ ಪಾಟೀಲ್ ವಿವಾದಾತ್ಮಕ ಹೇಳಿಕೆ

ಬರಗಾಲ ಬರಲೆಂದು ರೈತರು ದಾರಿ ಕಾಯ್ತಿರುತ್ತಾರೆ
ಬರಗಾಲ ಬಂದ್ರೆ ರೈತರಿಂದ ಸಾಲ ಮನ್ನಾದ ನಿರೀಕ್ಷೆ
ಆದ್ರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ
ಬೆಳಗಾವಿಯಲ್ಲಿ ಸಚಿವ ಶಿವಾನಂದ ಪಾಟೀಲ್‌ ಹೇಳಿಕೆ

First Published Dec 25, 2023, 12:32 PM IST | Last Updated Dec 25, 2023, 12:32 PM IST

ರೈತರ ಬಗ್ಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್(Shivananda Patil) ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಕರೆಂಟು ಫ್ರೀ, ನೀರು, ಗೊಬ್ಬರ ಎಲ್ಲ ಸರ್ಕಾರ ಕೊಟ್ಟಿದೆ. ಬರಗಾಲ(Drought) ಬರಲಿ ಅಂತಾ ರೈತರು ಕಾಯ್ತಿದ್ದಾರೆ ಎಂದಿದ್ದಾರೆ. ಬರಗಾಲ ಅಂದ್ರೆ ರೈತರು(farmers) ಸಾಲಮನ್ನಾ ನಿರೀಕ್ಷೆ ಇರುತ್ತೆ. ಎಲ್ಲ ಸಮಯದಲ್ಲಿ ಸಾಲಮನ್ನಾ ಹೇಗೆ ಸಾಧ್ಯ? ಎಂದು ಬೆಳಗಾವಿ(Belagavi) ಸುಟ್ಟಟ್ಟಿಯಲ್ಲಿ ಶಿವಾನಂದ ಪಾಟೀಲ್ ಕೇಳಿದ್ದಾರೆ. ಬರಗಾಲ ಬರಲೆಂದು ರೈತರು ಕಾಯ್ತಾರೆ. ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದ್ರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯಬೇಕು ಎನ್ನುವ ಮೂಲಕ ರೈತರ ವಿಚಾರದಲ್ಲಿ ಸಚಿವ ಶಿವಾನಂದ ಪಾಟೀಲ್‌ ಹಗುರವಾಗಿ ಮಾತನಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಬೆಂಗಳೂರಿನಲ್ಲಿ ಗೀತೋತ್ಸವ ಕಾರ್ಯಕ್ರಮ ಸಂಪನ್ನ: ಜಾತಿ, ಭೇದವಿಲ್ಲದೇ ಭಗವದ್ಗೀತೆ ಬರೆದ ಕೋಟ್ಯಂತರ ಜನ