ಬೆಂಗಳೂರಿನಲ್ಲಿ ಗೀತೋತ್ಸವ ಕಾರ್ಯಕ್ರಮ ಸಂಪನ್ನ: ಜಾತಿ, ಭೇದವಿಲ್ಲದೇ ಭಗವದ್ಗೀತೆ ಬರೆದ ಕೋಟ್ಯಂತರ ಜನ

ಕೋಟಿ ಗೀತಾ ಲೇಖನ ಯಜ್ಞದ ಅಂಗವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅದ್ದೂರಿ ಗೀತೋತ್ಸವ ಕಾರ್ಯಕ್ರಮ ನಡೆಯಿತು. ಎರಡು ದಿನಗಳ ಕಾಲ ನಡೆದ ಗೀತೋತ್ಸವ ಕಾರ್ಯಕ್ರಮದಲ್ಲಿ ಭಗವದ್ಗೀತೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ನಡೆದಿದ್ದು ಅದ್ದೂರಿಯಾಗಿ ಯಶಸ್ವಿಯಾಗಿದೆ. 

First Published Dec 25, 2023, 11:48 AM IST | Last Updated Dec 25, 2023, 11:48 AM IST

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆಯ ಉಭಯ ಪೀಠಾಧಿಪತಿಗಳ 4ನೇ ಪರ್ಯಾಯದ ಅಂಗವಾಗಿ ಯೋಜನೆಗೊಳ್ಳುತ್ತಿರುವ ಕೋಟಿ ಗೀತಾ ಯಜ್ಞಕ್ಕೆ ಭರ್ಜರಿ ಚಾಲನೆ ಸಿಕ್ಕಿತ್ತು. ಬೆಂಗಳೂರಿನ(Bengaluru) ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಎರಡು ದಿನ ಗೀತೋತ್ಸವ(Geethotsava) ಕಾರ್ಯಕ್ರಮ ನಡೀತು. ಪುತ್ತಿಗೆ ಮಠದ ಉಭಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಸುಶೀಂದ್ರ ತೀರ್ಥರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ತಿಗೊಂಡಿದೆ. ಈ ಮೂಲಕ ಒಂದು ಕೋಟಿಗೂ ಅಧಿಕ ಜನ ಭಗವದ್ಗೀತೆಯನ್ನು ಬರೆಯುವ ಮಹತ್ಕಾರ್ಯಕ್ಕೆ ಚಾಲನೆ ಸಿಕ್ಕಂತಾಗಿದೆ. ಮೊದಲನೇ ದಿನ ಭಗವದ್ಗೀತೆಯ 18 ಅಧ್ಯಾಯವನ್ನೊಳಗೊಂಡ ಗ್ರಂಥವನ್ನು ಬೆಳ್ಳಿಯ ರಥದಲ್ಲಿ ಇರಿಸಿ ತರಲಾಗಿತ್ತು. ಸಾವಿರಾರು ಜನರ ಸಮ್ಮುಖದಲ್ಲಿ ಭಗವದ್ಗೀತೆಯ ಪಠಣವೂ ಮೊಳಗಿತು. ಸಭಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಟ ಜಗ್ಗೇಶ್, ನಟಿ ರಾಧಿಕಾ ನಾರಾಯಣ್, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು. 2ನೇ ದಿನ ಅರಳು ಮಲ್ಲಿಗೆ ಪಾರ್ಥ ಸಾರಥಿ ನೇತೃತ್ವದಲ್ಲಿ ಉಭಯ ಮಠಾಧೀಶರ ಸಮ್ಮುಖದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಸಮಾರೋಪ ಸಮಾರಂಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್, ಹೆಚ್.ಎಸ್ ಪ್ರೇಮಾ, ಸಚ್ಚಿದಾನಂದ ಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗಿಯಾದರು. ಇದೇ ವೇಳೆ ಗೀತೋತ್ಸವದ ಅಂಗವಾಗಿ ಭಗವದ್ಗೀತೆಯ(Bhagavad Gita) ಕುರಿತಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಪುತ್ತಿಗೆ ಶ್ರೀಗಳ ಪರ್ಯಾಯದ ಅವಧಿಯಲ್ಲಿ ಜಗತ್ತಿನಾದ್ಯಂತ ಒಂದು ಕೋಟಿಗೂ ಅಧಿಕ ಜನ ಭಗವದ್ಗೀತೆಯನ್ನು ಬರೆದು ಸಮರ್ಪಿಸಲಿದ್ದಾರೆ. ಈ ಮಹಾತ್ಕಾರ್ಯದಲ್ಲಿ ಭಾಗಿಯಾಗಲು 2 ವರ್ಷ ಅವಕಾಶ ಇದೆ. ದೇಶ ವಿದೇಶಗಳಿಂದ ಕೋಟ್ಯಾಂತರ ಜನ ಜಾತಿ ಭೇದ ಮರೆತು ಈ ಸಂಕಲ್ಪದಲ್ಲಿ ಜೊತೆಯಾಗಲಿದ್ದಾರೆ. 

ಇದನ್ನೂ ವೀಕ್ಷಿಸಿ:  ಡ್ರೆಸ್ ಓಕೆ.. ಮೇಕಪ್ ಈ ಪಾಟಿ ಯಾಕೆ ? ಊರ್ವಶಿ ರೌಟೇಲಾ ಟ್ರೋಲ್ ಆಗಿದ್ದು ಇದಕ್ಕೆ !