ಮಲೆನಾಡನ್ನು ಮಸಣ ಮಾಡಲು ಹೊರಟ್ರು 'ಕಲ್ಲು' ಕೋಮು, 'ಇದೇನ್‌ ಹೊಸದಾ' ಅಂದ್ರಲ್ಲ ನಮ್ಮ ಹೋಮ್‌ ಮಿನಿಸ್ಟ್ರು!

ಸರ್ವ ಜನಾಂಗದ ಶಾಂತಿಯ ತೋಟ ಎಂದು ಬರೆದ ರಾಷ್ಟ್ರಕವಿ ಕುವೆಂಪು ಅವರ ನಾಡನ್ನು ಮತಾಂಧರು ಮಸಣ ಮಾಡಲು ಹೊರಟಿದ್ದಾರೆ. ಮತಾಂಧರು ದಾಂಧಲೆ ಎಬ್ಬಿಸಿದ್ದಾರೆ, ನೀವೇನು ಹೇಳ್ತೀರಿ ಅಂದರೆ ಇದೇನ್‌ ಹೊಸಾದಾ? ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದ್ದಾರೆ.
 

First Published Oct 2, 2023, 11:14 PM IST | Last Updated Oct 2, 2023, 11:13 PM IST

ಬೆಂಗಳೂರು (ಅ.2): 'ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ..' ಎಂದು ಬರೆದ ರಾಷ್ಟ್ರಕವಿ ಕುವೆಂಪು ಅವರ ನಾಡನ್ನು ಇಂದು ಮತಾಂಧರು ಮಸಣ ಮಾಡಲು ಹೊರಟಿದ್ದಾರೆ. ದೇಶವನ್ನು ಕಟ್ಟಿದ ಕಲಿಗಳು ರಾರಾಜಿಸಬೇಕಿದ್ದ ಭೂಮಿಯಲ್ಲಿ ಮತಾಂಧ ಔರಂಗಜೇಬ್‌, ಹಿಂದೂಗಳ ಮಾರಣಹೋಮ ಮಾಡಿದ್ದ ಟಿಪ್ಪು ಸುಲ್ತಾನನ ಆಳೆತ್ತರದ ಕಟೌಟ್‌ಗಳು ಕಂಡಿವೆ.

ಕುವೆಂಪು ಬಾಳಿ ಬದುಕಿದ ಜಿಲ್ಲೆಯಾದ ಮಲೆನಾಡು ಶಿವಮೊಗ್ಗದ ರಸ್ತೆಗಳಲ್ಲಿ ಸಾರ್ವಜನಿಕವಾಗಿ ಕತ್ತಿಯ ಪ್ರದರ್ಶನ ಮಾಡಿದ್ದಲ್ಲದೆ, ತಲ್ವಾರ್‌ಗಳನ್ನು ಹಿಡಿದುಕೊಂಡು ಹುಡುಗರು ರಸ್ತೆಯಲ್ಲಿ ಅಡ್ಡಾಡಿದ್ದಾರೆ. ಆ ಬಳಿಕ ನಡೆದ ಗಲಭೆಯಲ್ಲಿ ಹಿಂದುಗಳ ಮನೆಗಳ ಮೇಲೆ ಮತಾಂಧರು ಕಲ್ಲುತೂರಾಟ ಮಾಡಿದ್ದಾರೆ. ಆದರೆ, ಈ ಬಗ್ಗೆ ನಿಮ್ಮ ರಿಯಾಕ್ಷನ್‌ ಏನು ಅಂತಾ ಕೇಳಿದ್ರೆ, ಇದೇನು ಹೊಸದಾ? ಎಂದು ಗೃಹಸಚಿವ ಡಾ. ಜಿ ಪರಮೇಶ್ವರ್‌ ಉಡಾಫೆಯ ಮಾತನ್ನಾಡಿದ್ದಾರೆ.

ಶಿವಮೊಗ್ಗ ಭಾರತದ ಭಾಗವೋ, ಮುಸ್ಲಿಂ ಸಾಮ್ರಾಜ್ಯವೋ? ಪಾಕಿಸ್ತಾನ, ಸಾಬ್ರು ದ್ವಾರಬಾಗಿಲು ನಿರ್ಮಾಣ!

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆಯಲ್ಲಿ ಉದ್ರಿಕ್ತರಿಂದ ಪೊಲೀಸರು ಮೇಲೂ ಕಲ್ಲುತೂರಾಟ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 24 ಎಫ್‌ಐಆರ್‌ ದಾಖಲಾಗಿದ್ದು, 60 ಮಂದಿಯನ್ನು ಬಂಧಿಸಲಾಗಿದೆ.