ಅನಾಥ ಮಹಿಳೆಗೆ ರಕ್ಷಕನಾದ ಆರಕ್ಷಕ ಅಧಿಕಾರಿ, ಸೂಪರ್ ಕಾಪ್‌ಗೆ ಮೆಚ್ಚುಗೆ!


ಜೈನ ಮುನಿ ಹತ್ಯೆಯನ್ನು ಖಂಡಿಸಿ ಡಿಸಿ ಕಚೇರಿಯ ಮುಂದೆ ಪ್ರತಿಭಟನೆಯ ವೇಳೆ ಅಲ್ಲಿಗೆ ಬಂದಿದ್ದ ಮಹಿಳೆ, ಕೂತಲ್ಲಿಯೇ ರಕ್ತಕಾರುತ್ತಾ ಬಿದ್ದಿದ್ದಳು. ಈ ವೇಳೆ ಅಲ್ಲಿಯೇ ಇದ್ದ ಪಿಎಸ್‌ಐ ತಿರುಮಲೇಶ್‌ ಮಾನವೀಯತೆ ಮೆರೆದು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
 

First Published Jul 12, 2023, 9:12 PM IST | Last Updated Jul 12, 2023, 9:12 PM IST

ಶಿವಮೊಗ್ಗ (ಜು.12): ಅನಾಥ ಮಹಿಳೆಗೆ ಆರಕ್ಷಕ ಅಧಿಕಾರಿಯೊಬ್ಬರು ರಕ್ಷಕರಾದ ಘಟನೆ ನಡೆದಿದೆ. ಡಿಸಿ ಕಚೇರಿಯ ಆವರಣದಲ್ಲಿ ರಕ್ತಕಾರುತ ಬಿದ್ದಿದ್ದ ಮಹಿಳೆಯನ್ನು ಪಿಎಸ್‌ಐ ತಿರುಮಲೇಶ್‌ ರಕ್ಷಣೆ ಮಾಡಿದ್ದಾರೆ. ವಿಲವಿಲನೇ ಒದ್ದಾಡುತ್ತಾ ರಕ್ತ ಕಾರುತ್ತಿದ್ದ ಮಹಿಳೆಯನ್ನು ನೋಡಿ, ಆಕೆಯನ್ನು ರಕ್ಷಿಸಿಲು ಮಹಿಳಾ ಪೊಲೀಸರೂ ಹಿಂದೇಟು ಹಾಕಿದ್ದರು.

ವಿ ಎಚ್ ಪಿ, ಜೈನ ಸಂಘ ವತಿಯಿಂದ ಜೈನಮನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಪ್ರಜ್ಞೆ ತಪ್ಪಿ ಬಿದ್ದಿದ್ದ ಮಹಿಳೆಯನ್ನು ಮೇಲೆತ್ತಲು ಮಹಿಳಾ ಪೊಲೀಸರ ಮೀನಾ ಮೇಷ ಎಣಿಸಿದ್ದರು. ಡಿಸಿ ಕಚೇರಿಯ ಮೆಟ್ಟಿಲುಗಳ ಮೇಲೆ ಬಿದ್ದು ರಕ್ತ ಕಾರುತ್ತಿದ್ದ ಮಹಿಳೆಯನ್ನು ಕಂಡು ಪ್ರತಿಭಟನಾಕಾರರು ಓಡಿ ಹೋಗಿದ್ದರು. ಯಾರೊಬ್ಬರೂ ಮಹಿಳೆ ನೆರವಿಗೆ ಬಂದಿರಲಿಲ್ಲ. 108 ಆಂಬುಲೆನ್ಸ್ ಗೆ ಕರೆ ಮಾಡಿ ಎಂದವರೇ ಹೆಚ್ಚಾಗಿದ್ದರು. ಅಸಹಾಯಕ ಮಹಿಳೆಯ ಪರಿಸ್ಥಿತಿ ಕಂಡು ದಿಢೀರನೆ ಎಂಟ್ರಿ ಕೊಟ್ಟ ಸೂಪರ್ ಕಾಪ್ ತಿರುಮಲೇಶ್‌ ಆಕೆಯನ್ನು ರಕ್ಷಿಸಿಸಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಸ್ಪರ್ಧಿಸ್ತಾರಾ?

ಕೋಟೆ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ರಿಂದ ಅಸಹಾಯಕ ಮಹಿಳೆಗೆ ನೆರವಿನ ಹಸ್ತ ಚಾಚಿದ್ದಾರೆ. ಮಹಿಳೆಯನ್ನು ಎರಡು ಕೈಗಳಿಂದ ಹೊತ್ತೊಯ್ದ ತಿರುಮಲೇಶ್, ಪೊಲೀಸ್‌ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.  ಅನಾಥ ಮಹಿಳೆಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಡಿಸಿ ಕಚೇರಿಯ ಆವರಣದಲ್ಲಿ ಈ ಮಹಿಳೆ ಭಿಕ್ಷೆ ಬೇಡುತ್ತಿದ್ದಳು. ಅನಾಥ ಮಹಿಳೆಯ ಆಸ್ಪತ್ರೆಗೆ ಪೊಲೀಸ್ ವಾಹನದಲ್ಲಿ ಕರೆದ್ಯೊಯ್ದು ದಾಖಲಿಸಿದ ಪಿಎಸ್ಐ ತಿರುಮಲೇಶ್ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

Video Top Stories