'ಶಿವಮೊಗ್ಗ ಹುಣಸೋಡು ಸ್ಫೋಟ, ಪುಲ್ವಾಮ ಸ್ಪೋಟಕ್ಕಿಂತ ದೊಡ್ಡದು'
ಶಿವಮೊಗ್ಗದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಮಹಾದುರಂತವೊಂದು ಸಂಭವಿಸಿದೆ. ಗಣಿ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಪೆಟ್ಟಿಗೆಯಷ್ಟು ಜಿಲೆಟಿನ್ ಏಕಕಾಲದಲ್ಲಿ ಸ್ಫೋಟಿಸಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು (ಜ. 22): ಶಿವಮೊಗ್ಗದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಮಹಾದುರಂತವೊಂದು ಸಂಭವಿಸಿದೆ. ಗಣಿ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಪೆಟ್ಟಿಗೆಯಷ್ಟು ಜಿಲೆಟಿನ್ ಏಕಕಾಲದಲ್ಲಿ ಸ್ಫೋಟಿಸಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.
ಹುಣಸೋಡು ಮಹಾದುರಂತ, ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ
ಈ ದುರಂತದ ಬಗ್ಗೆ ಭೂಗರ್ಭ ತಜ್ಞರಾದ HSM ಪ್ರಕಾಶ್ ಅವರು ಮಾತನಾಡಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಾಗ, ಎಲ್ಲರೂ ಭೂಕಂಪ ಅಂತ ಭಾವಿಸಿದ್ದರು. ಆದರೆ ನಾನು ಇದು ಭೂಕಂಪವಲ್ಲ ಎಂದಿದ್ದೆ. ಆ ನಂತರ ಸ್ಫೋಟಗೊಂಡಿದ್ದು ಬೆಳಕಿಗೆ ಬಂದಿದೆ. ಇದು ಪುಲ್ವಾಮಾಗಿಂತ ದೊಡ್ಡ ಬ್ಲಾಸ್ಟ್. ಒಂದು ವೇಳೆ ಜನಸಂದಣಿಯಿರುವ ಪ್ರದೇಶದಲ್ಲಿ ನಡೆದಿದ್ರೆ, ಇನ್ನೂ ದೊಡ್ಡ ದುರಂತವಾಗುತ್ತಿತ್ತು' ಎಂದಿದ್ದಾರೆ.