Asianet Suvarna News Asianet Suvarna News

ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಚಹಾ...!

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಜನರು ಕಾಳಜಿ ಕೇಂದ್ರಗಳಲ್ಲಿ ತಂಗಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಮೊಟ್ಟೆ, ಬಾಳೆಹಣ್ಣು, ಮೊಸರು, ಚಹಾ ಕೊಡಬೇಕು ಅಂತ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 

ಬೆಂಗಳೂರು (ಅ. 19): ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಜನರು ಕಾಳಜಿ ಕೇಂದ್ರಗಳಲ್ಲಿ ತಂಗಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಇನ್ಮುಂದೆ ರೊಟ್ಟಿ, ಮೊಟ್ಟೆ, ಬಾಳೆಹಣ್ಣು, ಮೊಸರು, ಚಹಾ ಕೊಡಬೇಕು ಅಂತ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಕಲ್ಬುರ್ಗಿಯಲ್ಲಿ 150 ಗ್ರಾಮಗಳು ಮುಳುಗಡೆ; 23 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ

ಬೆಳಗಾವಿಯಲ್ಲಿ 6 ಸಾವಿರ ಮನೆಗಳು ಬಿದ್ದಿವೆ. ಪರಿಹಾರಕ್ಕಾಗಿ ಜಿಲ್ಲಾಡಳಿತದ ಬಳಿ 88 ಕೋಟಿ ರೂಗಳಿವೆ. ಹಾನಿ ಪರಿಹಾರಕ್ಕಾಗಿಯೇ 5 ಸಾವಿರ ಕೋಟಿ ಬೇಕಾಗುತ್ತದೆ. NDRF ಮೊತ್ತವನ್ನು ಹೆಚ್ಚಿಸಲು ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ಕೊಟ್ಟಿದೆ.