ಸೂರ್ಯನನ್ನೇ ತಡೆದಿದ್ದೇ ಎಂದಿದ್ದ ನಿತ್ಯಾನಂದನಿಗೆ ಈಗ ಸಾವಿನ ಭಯ!

ನಾನೇ ದೇವ್ರು, ಅಷ್ಟದಿಕ್ಕುಗಳನ್ನೇ ನಾನು ಬಂಧಿಸಬಲ್ಲೆ ಎಂದೆಲ್ಲಾ ಹೇಳುತ್ತಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನಿಗೆ ಈಗ ಸಾವಿನ ಭಯ ಶುರುವಾಗಿದೆ. ನನಗೆ ವೈದ್ಯರ ಸೇವೆ ಬೇಕಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.4): ಸ್ವಯಂ ಘೋಷಿತ ದೇವಮಾನವ ಎಂದೇ ಕರೆಸಿಕೊಂಡಿದ್ದ ನಿತ್ಯಾನಂದನಿಗೆ ಈಗ ಸಾವಿನ ಭಯ ಶುರುವಾಗಿದೆ. ನಾನೇ ದೇವ್ರು ನನಗೆ ಯಾರ ಭಯವೂ ಇಲ್ಲ ಎಂದು ಓಡಾಡಿಕೊಂಡಿದ್ದ ನಿತ್ಯಾನಂದ ಸಮಾಧಿ ಸೇರಿಕೊಂಡಿದ್ದಾಗಿ ಹೇಳಿದ್ದ. ಈಗ ಸಮಾಧಿಯಿಂದಲೇ ಮತ್ತೊಂದು ಸಂದೇಶ ಬಂದಿದೆ ಎಂದು ಹೇಳಿಕೊಂಡಿದ್ದು, ನನ್ನನ್ನು ಕಾಪಾಡಿ ಎನ್ನುವ ಸಂದೇಶ ಬಂದಿದೆಯಂತೆ.

ಸಮಾಧಿಯಲ್ಲಿರುವ ನಿತ್ಯಾನಂದನಿಗೆ ಈಗ ವೈದ್ಯರ ಸೇವೆ ಬೇಕಾಗಿದೆ ಎಂದು ಹೇಳಿದ್ದಾನೆ. ಅಷ್ಟದಿಕ್ಕುಗಳನ್ನೇ ಬಂಧಿಸಿದ್ದವನು, ಸೂರ್ಯನನ್ನೇ ತಡೆದಿದ್ದೆ ಎಂದು ಹೇಳಿದ್ದ ನಿತ್ಯಾನಂದ ಸ್ವಾಮಿಗೆ ಈಗ ಜೀವ ಭಯ ಶುರುವಾಗಿದೆ. ಕಾಪಾಡಿ ಎಂದು ನಿತ್ಯಾನಂದ (Nithyananda) ಶ್ರೀಲಂಕಾಕ್ಕೆ (Sri Lanka) ಕೇಳಿದ್ದಾರೆ. ಅತ್ಯಾಚಾರ-ಆರೋಪಿ ನಿತ್ಯಾನಂದ ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದು, ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿಸುವ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕೋರಿದ್ದಾರೆ.

Nithyananda Life in Danger: ಶ್ರೀಲಂಕಾದಲ್ಲಿ ವೈದ್ಯಕೀಯ ಆಶ್ರಯ ಪಡೀತಾರಾ ಸ್ವಯಂಘೋಷಿತ ದೇವಮಾನವ..?

ಅತ್ಯಾಚಾರ-ಆರೋಪಿ ನಿತ್ಯಾನಂದ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರದ ಉನ್ನತ ಮೂಲವು ದೃಢಪಡಿಸಿದೆ. ಆಗಸ್ಟ್ 2022 ರಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಪತ್ರ ಬರೆದಿದ್ದಾರೆ.

Related Video