ಸಂತೋಷ್‌ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ಚರಪ್ಪ ರಾಜೀನಾಮೆಗೆ ಪಕ್ಷದೊಳಗೆ ಒತ್ತಾಯ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ  (Santosh Suicide Case) ಕೇಸ್‌ನಲ್ಲಿ, ಸಚಿವ ಈಶ್ವರಪ್ಪ (Eshwarappa) ರಾಜೀನಾಮೆಗೆ ಪಕ್ಷದೊಳಗೆ ಒತ್ತಾಯ ಕೇಳಿ ಬರುತ್ತಿದೆ. ಎಲ್ಲಾ ನಾಯಕರು ನೈತಿಕತೆಯ ಪಾಠ ಮಾಡುತ್ತಿದ್ದಾರೆ. ಈಶ್ವರಪ್ಪ ರಾಜೀನಾಮೆ ಪಡೆಯುವುದೇ ಸೂಕ್ತ ಎಂದು ಕೇಂದ್ರ ನಾಯಕರಿಗೆ ಮಾಹಿತಿ ರವಾನೆಯಾಗಿದೆ. 
 

First Published Apr 14, 2022, 10:39 AM IST | Last Updated Apr 14, 2022, 10:40 AM IST

ಬೆಂಗಳೂರು (ಏ. 14): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ  (Santosh Suicide Case) ಕೇಸ್‌ನಲ್ಲಿ, ಸಚಿವ ಈಶ್ವರಪ್ಪ (Eshwarappa) ರಾಜೀನಾಮೆಗೆ ಪಕ್ಷದೊಳಗೆ ಒತ್ತಾಯ ಕೇಳಿ ಬರುತ್ತಿದೆ. ಎಲ್ಲಾ ನಾಯಕರು ನೈತಿಕತೆಯ ಪಾಠ ಮಾಡುತ್ತಿದ್ದಾರೆ. ಈಶ್ವರಪ್ಪ ರಾಜೀನಾಮೆ ಪಡೆಯುವುದೇ ಸೂಕ್ತ ಎಂದು ಕೇಂದ್ರ ನಾಯಕರಿಗೆ ಮಾಹಿತಿ ರವಾನೆಯಾಗಿದೆ. 

News Hour ನಾನ್ಯಾಕೆ ರಾಜೀನಾಮೆ ಕೊಡ್ಲಿ ಎಂದ ಈಶ್ವರಪ್ಪ, ಪಟ್ಟು ಬಿಡದ ಕಾಂಗ್ರೆಸ್!

ಸಂತೋಷ್‌ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆಯಿಂದ ಶೀಘ್ರ ಸತ್ಯಾಂಶ ಹೊರಗೆ ಬರಲಿದೆ. ವರಿಷ್ಠರಿಗೆ ಎಲ್ಲ ವಿಷಯ ತಿಳಿದಿದೆ. ನಾನೂ ಹೇಳಿದ್ದೇನೆ. ಸಚಿವ ಈಶ್ವರಪ್ಪ ಅವರು ರಾಜೀನಾಮೆ ಬಗ್ಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಕರೆಸಿ ಮಾತಾಡುತ್ತೇನೆ' ಎಂದು ಸಿಎಂ ಬೊಮ್ಮಾಯಿ (CM Bommai) ಹೇಳಿದ್ದಾರೆ.