Asianet Suvarna News Asianet Suvarna News

News Hour ನಾನ್ಯಾಕೆ ರಾಜೀನಾಮೆ ಕೊಡ್ಲಿ ಎಂದ ಈಶ್ವರಪ್ಪ, ಪಟ್ಟು ಬಿಡದ ಕಾಂಗ್ರೆಸ್!

ಬುಧವಾರ ಇಡೀ ದಿನ ರಾಜ್ಯ ರಾಜಕಾರಣದಲ್ಲಿ ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ, ಅದಕ್ಕಾಗಿ ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆ ವಿಚಾರಗಳೇ ಸುದ್ದಿಯಾದವು. ಈಶ್ವರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡೋದಿಲ್ಲ ಎಂದು ಹೇಳಿದ್ದರೆ, ಕಾಂಗ್ರೆಸ್ ಮಾತ್ರ ರಾಜೀನಾಮೆಗಾಗಿ ಪಟ್ಟು ಹಿಡಿದು ಕುಳಿತಿದೆ.
 

First Published Apr 13, 2022, 11:52 PM IST | Last Updated Apr 13, 2022, 11:53 PM IST

ಬೆಂಗಳೂರು (ಏ.13): ತಮ್ಮ ಮೇಲಿನ 40% ಕಮೀಷನ್ ಆರೋಪದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಪೋಹಗಳ ನಡುವೆಯೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೊಂದೆಡೆ ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ (Contractor Santosh Patil) ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಕೆಎಸ್ ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ (Congress)ಒತ್ತಾಯ ಮಾಡಿದೆ. ಅದರಂತೆ ಇಂದು ದೆಹಲಿ ಹಾಗೂ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ದೊಡ್ಡ ಮಟ್ಟದ ಪ್ರತಿಭಟನೆಯಾಗಿದ್ದು, ಈಶ್ವರಪ್ಪ ಅವರ ಮನೆಯ ಮುಂದೆ ಅಹೋರಾತ್ರಿ ಧರಣಿ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ.

Suicide Case: ಈಶ್ವರಪ್ಪ ಅಂಥವರಲ್ಲ.. ಅಂಥವರಲ್ಲ..: ಮಖಣಾಪೂರ ಸ್ವಾಮೀಜಿ

ಇನ್ನೊಂದೆಡೆ, ಕಾಂಗ್ರೆಸ್ ಮುಖಂಡರೆಲ್ಲ ಬೆಳಗಾವಿಗೆ ತೆರಳಿ ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಪಕ್ಷದ ವತಿಯಿಂದ 11 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿದೆ.  ಈ ನಡಯವೆ ಕಮೀಷನ್ ವಿಚಾರದಲ್ಲಿ ಸಿಲುಕಿಕೊಂಡಿರುವ ಸಚಿವ ಕೆಎಸ್ ಈಶ್ವರಪ್ಪ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಅವಸರ ತೋರುತ್ತಿಲ್ಲ. ಹಾಗೇನಾದರೂ ರಾಜೀನಾಮೆ ಪಡೆದಲ್ಲಿ ಈಶ್ವರಪ್ಪ ಮೇಲಿನ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತಾಗಲಿದೆ ಎನ್ನುವ ಎಚ್ಚರಿಕೆಯನ್ನು ಹೈಕಮಾಂಡ್ ತೋರಿದೆ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ವೇಳೆಗೆ ದೊಡ್ಡ ಅಸ್ತ್ರ ಸಿಕ್ಕಂತಾಗಲಿದೆ ಎನ್ನುವ ಅಭಿಪ್ರಾಯ ಹೊಂದಿದೆ.