Asianet Suvarna News Asianet Suvarna News

ಸ್ವಪಕ್ಷದ ಮುಸ್ಲಿಂ ನಾಯಕನನ್ನು ಮುಗಿಸಿದ್ದೇ ಸಿದ್ದರಾಮಯ್ಯ: ಎಚ್‌ಡಿಕೆ

Oct 16, 2021, 12:19 PM IST

ಬೆಂಗಳೂರು (ಅ. 16): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಅವರ ಬಗ್ಗೆ ‘ಕಮಿಷನ್‌ ಹಾಗೂ ಪರ್ಸೆಂಟೇಜ್‌ ಗಿರಾಕಿ’ ಎಂಬ ಹೇಳಿಕೆ ನೀಡಿರುವ ಸಲೀಂ ಮತ್ತು ಉಗ್ರಪ್ಪ ಅವರ ನಡುವಿನ ವಿಡಿಯೋ ಸಂಭಾಷಣೆ ವೈರಲ್‌ ಆಗಿದೆ. ಇದು ರಾಜಕೀಯ ಸಂಚಲನ ಉಂಟು ಮಾಡಿದೆ. 

ಬೈ ಎಲೆಕ್ಷನ್ ಗೆಲ್ಲಲು ಬಿಜೆಪಿ ಜಾತಿ ಲೆಕ್ಕಾಚಾರ: ಸಚಿವರಿಗೆ ಸ್ಪೆಷಲ್ ಟಾಸ್ಕ್ ಕೊಟ್ಟ ಸಿಎಂ

ಈ ವಿಚಾರವಾಗಿ ಸಿದ್ದರಾಮಯ್ಯಗೆ (Siddaramaiah) ಎಚ್‌ಡಿಕೆ (HDKumaraswamy) ಗುದ್ದು ನೀಡಿದ್ದಾರೆ. 'ಆಡಿಯೋ ನೆಪದಲ್ಲಿ ಸಲೀಂ ಮೊಹಮ್ಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ರಸಸ್ವಾದ ಮಾಡಿ. ಪುಕ್ಕಟೆ ಮನರಂಜನೆ ಪಡೆದು ವ್ಯಕ್ತಿಗೆ ರಕ್ಷಣೆ ನೀಡಿದ್ದೀರಿ. ಅಲ್ಪ ಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ ಸಿದ್ದಹಸ್ತರೇ, ನಿಮಗೆ ಪಾಠ ಕಲಿಸುವ ಜನತಾ ಪರ್ವ ಆರಂಬವಾಗಲಿದೆ, ಕಾದು ನೋಡಿ  ಎಂದು ಟೀಕಿಸಿದ್ದಾರೆ