Asianet Suvarna News Asianet Suvarna News

ಬೈಎಲೆಕ್ಷನ್‌ ಗೆಲ್ಲಲು ಬಿಜೆಪಿ ಜಾತಿ ಲೆಕ್ಕಾಚಾರ: ಸಚಿವರಿಗೆ ಸ್ಪೆಷಲ್‌ ಟಾಸ್ಕ್‌ ಕೊಟ್ಟ ಸಿಎಂ

Oct 16, 2021, 10:01 AM IST

ಬೆಂಗಳೂರು(ಅ.16): ಉಪಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಜಾತಿ ಲೆಕ್ಕಾಚಾರ ನಡೆಸಿದೆ. ಹೌದು, ಎರಡೂ ಕ್ಷೇತ್ರಗಳಲ್ಲಿ ಗೆಲ್ಲೋದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ಲಾನ್‌ವೊಂದನ್ನ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಬೊಮ್ಮಾಯಿ ಅವರು ಸಚಿವರಿಗೆ ಸ್ಪೆಷಲ್‌ ಟಾಸ್ಕ್‌ ಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್‌ ಕ್ಷೇತ್ರಗಳಲ್ಲಿ ಗೆಲ್ಲಿಸಲೇಬೇಕು ಅಂತ ಸಚಿವರಿಗೆ ಸಿಎಂ ಬೊಮ್ಮಾಯಿ ಟಾಸ್ಕ್‌ ಕೊಟ್ಟಿದ್ದಾರೆ. ಈ ಸಂಬಂಧ ಜಾತಿ ಮುಖಂಡರನ್ನ ಭೇಟಿ ಮಾಡಲು ಸೂಚನೆ ನೀಡಲಾಗಿದೆ. ಸಮುದಾಯದ ಕುಂದುಕೊರತೆ ನೀಗಿಸಲು ಸಿಎಂ ಸೂಚನೆ ನೀಡಿದ್ದಾರೆ. 

ಹಾನಗಲ್ ಉಪಸಮರಕ್ಕೆ ಸಿದ್ದು ಎಂಟ್ರಿ, ಶ್ರೀನಿವಾಸ್ ಮಾನೆ ಪರ ಪ್ರಚಾರ