ಕೈ ಕೊಟ್ಟ ಮುಂಗಾರು, ಗಗನಕ್ಕೇರಿದ ಅಕ್ಕಿ ರೇಟು: ಕೂಲಿ ಮಾಡಿ ಜೀವನ ಸಾಗಿಸೋರ ಕತೆ ಏನು..?

ಮುಂಗಾರು ಮಳೆ ಕೈ ಕೊಟ್ಟು ಈ ವರ್ಷ ರಾಜ್ಯದಲ್ಲಿ ಬೆಳೆ ಇಲ್ಲದಂತಾಗಿದೆ. ತರಕಾರಿ, ಹಣ್ಣು, ಹೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇದೀಗ ಈ ಸಾಲಿಗೆ ಅಕ್ಕಿ ಕೂಡ ಸೇರ್ತಿದೆ. ಜನಸಾಮಾನ್ಯರು ಅನ್ನ ತಿನ್ನಬೇಕೊ ಬೇಡ್ವೊ ಅಂತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
 

First Published Oct 27, 2023, 10:28 AM IST | Last Updated Oct 27, 2023, 10:28 AM IST

ಟೊಮ್ಯಾಟೋ ನೋಡಿದ್ರೆ 200 ಗಡಿ ದಾಟಿತ್ತು.ಟೊಮ್ಯಾಟೋ ಏನೋ ಕೈಗೆಟುಕುವ ದರಕ್ಕೆ ಕುಸಿತವಾಗಿದೆ. ಆದ್ರೀಗ ಈರುಳ್ಳಿ(Onion) ಬೆಲೆ ಗಗನ ಮುಖಿಯಾಗುತ್ತಿದೆ. ತರಕಾರಿ ವಿಚಾರದಲ್ಲೇನೋ ಮ್ಯಾನೇಜ್ ಮಾಡಿಕೊಳ್ಬೋದು. ಆದ್ರೆ, ಈಗ ತಿನ್ನೋ ಅನ್ನಕ್ಕೂ ಕಷ್ಟವಾಗುವ ಕಾಲ ಬಂದಿದೆ.ಅಕ್ಕಿ ಬೆಲೆ ಗಗನ ಮುಖಿಯಾಗಿದೆ. ಮಳೆಯಿಲ್ಲ, ಬೆಳೆ ಕೈಹಿಡಿಯುವ ಲಕ್ಷಣ ಕಾಣ್ತಿಲ್ಲ. ಇದರಿಂದ ರಾಜ್ಯದಲ್ಲಿ ಅಕ್ಕಿ(Rice) ಅಭಾವ ಶುರುವಾಗಿದ್ದು, ಅಕ್ಕಿ ಬೆಲೆ ಗಗನಕ್ಕೇರಿದೆ. 6 ತಿಂಗಳ ಹಿಂದೆ 40-50 ರೂಪಾಯಿ ಇದ್ದ ಕೆಜಿ ಅಕ್ಕಿ ದರ ಈಗ 70-80 ರೂ.ಗೆ ತಲುಪಿದ್ದು ಶತಕದತ್ತ ದಾಪುಗಾಲಿಡುತ್ತಿದೆ. ಎಪಿಎಂಸಿ ಮಂಡಿಗಳಲ್ಲೇ ಅಕ್ಕಿ ಸರಾಸರಿ 65 ರೂ.ಗೆ ಮಾರಾಟವಾಗ್ತಿದೆ. 6 ತಿಂಗಳ ಅಂತರದಲ್ಲಿ ಯಾವ ಅಕ್ಕಿ ಎಷ್ಟು ಬೆಲೆ(Price) ಏರಿಕೆಯಾಗಿದೆ ಅಂತ ನೋಡೊದಾದ್ರೆ. 6 ತಿಂಗಳ ಹಿಂದೆ 40 ರೂ. ಇದ್ದ RNR ಸ್ಟೀಮ್ ರೈಸ್, ವಾರದ ಹಿಂದೆ 56 ರೂ ಆಗಿತ್ತು. ಈಗ 64 ರೂಗೆ ಏರಿಕೆಯಾಗಿದೆ. RNR ರಾ ರೈಸ್ 6 ತಿಂಗಳ ಹಿಂದೆ 55 ರೂ. ಇದ್ದಿದ್ದು, ವಾರದ ಹಿಂದೆ 60 ರೂ. ಆಗಿತ್ತು. ಈಗ 65 ರೂ.ಗೆ ಏರಿಕೆಯಾಗಿದೆ. 6 ತಿಂಗಳ ಹಿಂದೆ 38 ರೂ. ಇದ್ದ ಸೋನಾ ಮಸೂರಿ ಸ್ಟೀಮ್ ರೈಸ್, ವಾರದ ಹಿಂದೆ 42 ರೂ, ಆಗಿತ್ತು. ಈಗ 55 ರೂ.ಗೆ ಕಾಲಿಟ್ಟಿದೆ. 6 ತಿಂಗಳ ಹಿಂದೆ 65 ರೂ. ಇದ್ದ ಬುಲೆಟ್ ರೈಸ್, ವಾರದ ಹಿಂದೆ 70 ರೂ. ಆಗಿತ್ತು. ಈಗ 74 ರೂ.ಗೆ ಏರಿಕೆಯಾಗಿದೆ. 6 ತಿಂಗಳ ಹಿಂದೆ 59 ರೂ. ಇದ್ದ ಕೋಲಮ್ ರಾ ರೈಸ್, ವಾರದ ಹಿಂದೆ 65 ರೂ. ಆಗಿತ್ತು. ಈಗ 70 ರೂ.ಗೆ ತಲುಪಿದೆ. ಈ ಹಿಂದೆ 25 ರೂ. ಇದ್ದ ನುಚ್ಚು ರಾ ರೈಸ್, ವಾರದ ಹಿಂದೆ 30 ರೂ. ಆಗಿತ್ತು. ಈಗ 32 ರೂ.ಗೆ ಏರಿಕೆಯಾಗಿದೆ. 6 ತಿಂಗಳ ಹಿಂದೆ 46 ರೂ. ಇದ್ದ ಪವನ್ ಶರ್ಮಾ ಸಿಲ್ಕಿ ರೈಸ್, ವಾರದ ಹಿಂದೆ 50 ರೂ. ಆಗಿತ್ತು. ಈಗ 55 ರೂ.ಗೆ ಲಗ್ಗೆ ಇಟ್ಟಿದೆ. ಹಿಂದೆ 50 ರೂ. ಇದ್ದ ಸೋನಾ ಮಸೂರಿ ರಾ ರೈಸ್, ವಾರದ ಹಿಂದೆ 54 ರೂ, ಆಗಿತ್ತು. ಈಗ 62 ರೂ.ಗೆ ಬಂದು ತಲುಪಿದೆ. ಬೆಲೆ ಏರಿಕೆಗೆ ಮಳೆ ಕೈ ಕೊಟ್ಟಿದ್ದೇ ಮೂಲ ಕಾರಣ. ಮಳೆ ಇಲ್ಲದೆ ಭತ್ತದ ಬೆಳೆ ನೆಲ ಕಚ್ಚಿದೆ. ಬಹುತೇಕ ನವೆಂಬರ್ ಅಂತ್ಯಕ್ಕೆ ಈ ಸಲದ ಹೊಸ ಅಕ್ಕಿ ಮಾರುಕಟ್ಟೆ ಪ್ರವೇಶ ಮಾಡಬೇಕು. ಆದರೆ ಈಗಾಗಲೇ ಅಕ್ಕಿ ಕೊರತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕಿ ರೇಟು ನೂರರ ಗಡಿ ತಲುಪಿದರೂ ಅಚ್ಚರಿಯಿಲ್ಲ. ಒಂದೆಡೆ ತರಕಾರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಈಗ ಅಕ್ಕಿ ಬೆಲೆ ಏರಿಕೆ.. ಎಲ್ಲವೂ ಹೀಗೆ ಏರಿಕೆಯಾಗ್ತಿದೆ ನಾವು ಬದುಕೋದ್ ಹೇಗೆ ಅಂತಿದ್ದಾರೆ ಜನಸಾಮಾನ್ಯರು.

ಇದನ್ನೂ ವೀಕ್ಷಿಸಿ:  ಇಂಡಿಯನ್ ಫುಟ್‌ಬಾಲ್‌ ಟೂರ್ನಮೆಂಟ್‌ನಲ್ಲಿ ಅಪ್ಪು ಸ್ಮರಣೆ..!