ಇಂಡಿಯನ್ ಫುಟ್‌ಬಾಲ್‌ ಟೂರ್ನಮೆಂಟ್‌ನಲ್ಲಿ ಅಪ್ಪು ಸ್ಮರಣೆ..!

ಇಂಡಿಯನ್ ಫುಟ್‌ಬಾಲ್‌ ಟೂರ್ನಮೆಂಟ್‌ನಲ್ಲಿ ಅಪ್ಪು ಸ್ಮರಣೆ
ಅಪ್ಪು ಭಾವ ಚಿತ್ರದ ಧ್ವಜ ಹಿಡಿದು ಮಿಸ್ ಯೂ ಎಂದ ಫ್ಯಾನ್
ಅಕ್ಟೋಬರ್ 29ಕ್ಕೆ ನಡೆಯಲಿದೆ ಪುನೀತ್ ರಾಜ್‌ಕುಮಾರ್‌ ಸ್ಮರಣೆ 

Share this Video
  • FB
  • Linkdin
  • Whatsapp

ಅಪ್ಪು ಅಗಲಿ 2 ವರ್ಷವಾಗುತ್ತಿದ್ದರೂ ಅವರ ಸ್ಮರಣೆ ಮಾತ್ರ ನಿಂತಿಲ್ಲ. ಎಲ್ಲ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಫುಟ್‌ಬಾಲ್‌ ಟೂರ್ನಮೆಂಟ್‌ನಲ್ಲಿ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ವಿಶೇಷ ನಮನ ಸಲ್ಲಿಸಿದ್ದಾರೆ. ಭಾರತೀಯ ಫುಟ್‌ಬಾಲ್ ಕ್ಲಬ್ ವತಿಯಿಂದ ನಗರದ ಕಂಠೀರವ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ಟೂರ್ನಮೆಂಟ್‌ನಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್ ತಂಡ ಹಾಗೂ ಅಪ್ಪು ಅಭಿಮಾನಿಗಳು(Appu fans) ವಿಶೇಷವಾಗಿ ಸ್ಮರಿಸಿದ್ದಾರೆ. ಬಹು ದೊಡ್ಡ ಹಳದಿ ಕೆಂಪು ಬಣ್ಣಗಳ ಧ್ವಜದ ಮುಂದೆ ಪುನೀತ್ ರಾಜ್‌ಕುಮಾರ್ ನಗುತ್ತಿರುವ ಭಾವಚಿತ್ರ ಹಿಡಿದು ನಮ್ಮೊಂದಿಗೆ ಎಂದೆಂದಿಗೂ ನೀನೇ ರಾಜಕುಮಾರ ಅಂತಾ ಅಭಿಮಾನಿಗಳು ಭಾವುಕರಾಗಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಯೊಬ್ಬರು ಅವರ ಭಾವಚಿತ್ರವಿರುವ ಧ್ವಜ ಹಿಡಿದು ಮಿಸ್ ಯೂ ಅಪ್ಪು ಎಂದು ನಮಸ ಸಲ್ಲಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ! ಬಾಕ್ಸಾಫೀಸ್‌ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್‌ಸ್ಟರ್‌..!

Related Video