Asianet Suvarna News Asianet Suvarna News

ಸೇನೆಯಿಂದ ನಿವೃತ್ತರಾಗಿ ತಮ್ಮೂರಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

 20 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ  ನಿವೃತ್ತರಾಗಿ ತಮ್ಮೂರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರು ವಿಭಿನ್ನವಾಗಿ ಸ್ವಾಗತ ಕೋರಿದರು. ಶಾಲಾ ಮಕ್ಕಳು ಅವರಿಗೆ ಅದ್ಧೂರಿ ಸ್ವಾಗತ ಕೋರಿದರೆ, ಗ್ರಾಮದ ಮಹಿಳೆಯರು ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು.  

Feb 28, 2021, 1:16 PM IST

ಧಾರವಾಡ (ಫೆ. 28):  20 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ  ನಿವೃತ್ತರಾಗಿ ತಮ್ಮೂರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರು ವಿಭಿನ್ನವಾಗಿ ಸ್ವಾಗತ ಕೋರಿದರು. ಶಾಲಾ ಮಕ್ಕಳು ಅವರಿಗೆ ಅದ್ಧೂರಿ ಸ್ವಾಗತ ಕೋರಿದರೆ, ಗ್ರಾಮದ ಮಹಿಳೆಯರು ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು.  ಇಂತದ್ದೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ಧಾರವಾಡ ತಾಲೂಕಿನ ತಡಕೋಡ ಖಾನಾಪುರ ಗ್ರಾಮ.

ಬೆಳಗಾವಿ ಬೈ ಎಲೆಕ್ಷನ್‌ ಅಖಾಡಕ್ಕೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ.?

ಇಲ್ಲಿನ ಸಿದ್ದಪ್ಪ ಗುಂಡಗೋವಿ ಇಪ್ಪತ್ತು ವರ್ಷಗಳ ಹಿಂದೆ ಭಾರತೀಯ ಸೇನೆಯನ್ನು ಸೇರಿದ್ದರು. ಗ್ರಾಮದ ಶಿವರುದ್ರಪ್ಪ-ಗಂಗವ್ವ ದಂಪತಿಯ ನಾಲ್ಕನೇ ಮಗನಾಗಿರೋ ಸಿದ್ದಪ್ಪ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ವಾಪಸ್ಸಾಗಿದ್ದಾರೆ.  39 ವರ್ಷದ ಸಿದ್ದಪ್ಪ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿಯೇ ಇದ್ದು ಯುವಕರಿಗೋಸ್ಕರ ಏನಾದರೂ ಮಾಡಬೇಕು ಅಂತಾ ನಿರ್ಧರಿಸಿದ್ದಾರೆ. ಅದರಲ್ಲೂ ಸೇನೆಗೆ ಭರ್ತಿಯಾಗೋ ಕನಸು ಹೊತ್ತಿರೋ ಯುವಕರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.