
ಸನಾತನ ಧರ್ಮದ ವಿರುದ್ಧ ಮುಂದುವರಿದ ಡಿಎಂಕೆ ದಾಳಿ: ಅಂತರ ಕಾಯ್ದುಕೊಳ್ತಾ I.N.D.I.A ಕೂಟ ?
ಡಿಎಂಕೆ ಎಂಪಿ ಎ. ರಾಜಾ ಹಾಗೂ ಉದಯನಿಧಿ ಸ್ಟಾಲಿನ್ ಇಬ್ಬರು ನಾಯಕರು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದು, ಇದು ತಮಿಳುನಾಡಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡಿನಲ್ಲಿ ಸನಾತನ ಧರ್ಮದ(Sanatana Dharma)ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಡಿಎಂಕೆ ನಾಯಕರು ಸನಾತನ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಮೊನ್ನೆ ಉದಯನಿಧಿ(Udayanidhi) ಮಾತನಾಡಿದ್ದು, ನಿನ್ನೆ ಎ. ರಾಜಾ(A.Raja) ಸನಾತನ ಧರ್ಮದ ವಿರುದ್ಧ ಮಾತನಾಡಿದ್ದಾರೆ. ಇನ್ನೂ ವಿಪಕ್ಷಗಳು ಈ ರೀತಿ ಹೇಳಿಕೆ ನೀಡುತ್ತಿದ್ದರೂ ನಾಯಕರು ಮಾತ್ರ ಸುಮ್ಮನಿದ್ದಾರೆ. ಇನ್ನೂ ರಾಜ್ಯ ನಾಕಯರಾದ ಪ್ರಿಯಾಂಕ್ ಖರ್ಗೆ, ಡಾ.ಜಿ. ಪರಮೇಶ್ವರ್ ಸಹ ಇವರ ಹೇಳಿಕೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಇನ್ನೊಂದೆಡೆ ಲೋಕಸಭಾ ಚುನಾವಣೆಗೆ ಇದು ಬಿಜೆಪಿ ಅಸ್ತ್ರವಾಗುವ ಸಾಧ್ಯತೆಯೂ ಇದೆ. ಈ ಹಿಂದೂ ವಿರೋಧಿ ಅಜೆಂಡಾದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎನ್ನಲಾಗ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಹಿಂದೂ ಧರ್ಮ ಟೀಕೆಯ ಅಸ್ತ್ರವಾಗ್ತಿದೆಯಾ? ಲೋಕಸಭೆ ಕುರುಕ್ಷೇತ್ರದಲ್ಲಿ ಬಿಜೆಪಿಗೆ ಚುನಾವಣಾ ಅಸ್ತ್ರನಾ ?