Asianet Suvarna News Asianet Suvarna News

ಎಲ್ಲಿದ್ದೀಯಪ್ಪಾ ಪ್ರಜ್ವಲ್?: 20 ದಿನಗಳಿಂದ ಅಜ್ಞಾತವಾಸ, ನಿತ್ಯಾನಂದನ ದಾರಿ ತುಳಿತಾನಾ ಪೆನ್‌ಡ್ರೈವ್ ವೀರ?

ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಸೇಫ್ ಆಗಿ ಇರುವಂತೆ ಮಾಡಿರೋದು ಅವರ ಕೈಯಲ್ಲಿರೋ ರಾಜತಾಂತ್ರಿಕ ಪಾಸ್‌ಪೋರ್ಸ್. ಪಾಸ್‌ಪೋರ್ಟ್ ವ್ಯಾಲಿಟಿಡಿ ಮುಗಿದ್ರೂ ಪ್ರಜ್ವಲ್ ರೇವಣ್ಣ ವಾಪಸ್ ಬಂದೇ ಬರ್ತಾರೆ ಅನ್ನೋದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಯಾಕಂದ್ರೆ ಫಾರಿನ್‌ನಲ್ಲೇ ಇರಲು ಪ್ರಜ್ವಲ್ ರೇವಣ್ಣ ಮುಂದೆ ಮತ್ತೆರಡು ಅಸ್ತ್ರಗಳಿದ್ದಾವೆ. 

ಬೆಂಗಳೂರು(ಮೇ.17):  20 ದಿನಗಳಿಂದ ಅಜ್ಞಾತವಾಸ, ಎಲ್ಲಿ ಹೋಗಿದ್ದೀಯಪ್ಪ ಪ್ರಜ್ವಲ್ ರೇವಣ್ಣ..? 5 ಬಾರಿ ಬುಕ್ ಆಗಿದ್ದ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಆಗಿದ್ದೇಕೆ..? ಮನೆಯವರಿಗೂ ಗೊತ್ತಿಲ್ಲ.. ದಳಪತಿಗಳಿಗೂ ಸುಳಿವೇ ಇಲ್ಲ..! ನಿತ್ಯಾನಂದನ ದಾರಿ ತುಳಿತಾನಾ ಹಾಸನದ ಪೆನ್’ಡ್ರೈವ್ ವೀರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಅಜ್ಞಾತವಾಸಿ.

ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಸೇಫ್ ಆಗಿ ಇರುವಂತೆ ಮಾಡಿರೋದು ಅವರ ಕೈಯಲ್ಲಿರೋ ರಾಜತಾಂತ್ರಿಕ ಪಾಸ್‌ಪೋರ್ಸ್. ಪಾಸ್‌ಪೋರ್ಟ್ ವ್ಯಾಲಿಟಿಡಿ ಮುಗಿದ್ರೂ ಪ್ರಜ್ವಲ್ ರೇವಣ್ಣ ವಾಪಸ್ ಬಂದೇ ಬರ್ತಾರೆ ಅನ್ನೋದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಯಾಕಂದ್ರೆ ಫಾರಿನ್‌ನಲ್ಲೇ ಇರಲು ಪ್ರಜ್ವಲ್ ರೇವಣ್ಣ ಮುಂದೆ ಮತ್ತೆರಡು ಅಸ್ತ್ರಗಳಿದ್ದಾವೆ. ಅದೇ ಅಸೈಲಮ್ ಅಸ್ತ್ರ ಮತ್ತು ನಿತ್ಯಾನಂದನ ದಾರಿ.. ಅಷ್ಟಕ್ಕೂ ಏನಿದರ ಗುಟ್ಟು..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.

ಹೆಚ್‌ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಆ 3 ಅಂಶಗಳು!

ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಸ್ಪರ್ಧಿಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೆ, ಆಗ್ಲಾದ್ರೂ ವಿದೇಶದಿಂದ ವಾಪಸ್ ಬರ್ತಾರಾ..? ಆರು ತಿಂಗಳೊಳಗೆ ಬರ್ಲೇಬೇಕು. ಯಾಕ್ ಗೊತ್ತಾ..? ಈ ಕುತೂಹಲದ ಪ್ರಶ್ನೆಗೆ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ ನೋಡಿ.