ಹೆಚ್ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಆ 3 ಅಂಶಗಳು!
ಎರಡು ದಿನಗಳ ಕಾಲ ತೀವ್ರ ವಾದ ಪ್ರತಿವಾದ ಆಲಿಸಿದ ನಂತರ ಕೋರ್ಟ್ ರೇವಣ್ಣರಿಗೆ ಬೇಲ್ ಮಂಜೂರು ಮಾಡಿದೆ. ಕೋರ್ಟ್ ನಲ್ಲಿ ಏನೆಲ್ಲಾ ವಾದ ಪ್ರತಿವಾದ ನಡೆಯಿತು ಇಲ್ಲಿದೆ ಮಾಹಿತಿ.
ಅಂತೂ ಇಂತೂ ರೇವಣ್ಣರಿಗೆ ಬೇಲ್ ಸಿಕ್ಕಿದೆ. ಎರಡು ದಿನಗಳ ಕಾಲ ತೀವ್ರ ವಾದ ಪ್ರತಿವಾದ ಆಲಿಸಿದ ನಂತರ ಕೋರ್ಟ್ ರೇವಣ್ಣರಿಗೆ ಬೇಲ್ ಮಂಜೂರು ಮಾಡಿದೆ. ಈ ಮೂಲಕ 5 ದಿನಗಳ ಕಾಲ ಜೈಲಿನ ಕೋಟೆಯಲ್ಲಿ ಕಳೆದಿದ್ದ ಹಾಸನಾಧಿಪತಿ ಇವತ್ತು ನಿರಾಳರಾಗಿದ್ದಾರೆ.
ದೆಹಲಿ ಹೈಕೋರ್ಟ್ ನೀಡಿದ್ದ 2 ಆದೇಶ ಪ್ರತಿ ಸಲ್ಲಿಸಿ, ಪ್ರಜ್ವಲ್ ಪ್ರಕರಣವನ್ನೂ ಪ್ರಸ್ತಾಪಿಸಿ ಪಬ್ಲಿಕ್ ಪ್ರಾಸೀಕ್ಯೂಟರ್ ಜಾಮೀನು ಮಂಜೂರು ಮಾಡಬಾರದ್ದು ಅಂತ ವಾದಿಸಿದ್ರು. ಆದ್ರೆ ರೇವಣ್ಣ ಪರ ವಕೀಲ ನಾಗೇಶ ಮೂರು ಅಂಶಗಳನ್ನ ಕೋರ್ಟ್ ಮುಂದೆ ಇಟ್ಟು ಜಾಮೀನು ಮಂಜೂರು ಮಾಡಲು ಕೋರಿಕೊಂಡರು. ಕೊನೆಗೆ ಆ ಅಂಶವೇ ರೇವಣ್ಣ ರಿಲೀಫ್ ಆಗಲು ಕಾರಣವಾಗಿದೆ.