ಡಾ.ಮಂಜುನಾಥ್‌ ರಾಜಕೀಯಕ್ಕೆ ಬರ್ತಾರಾ? ಶಿವರಾತ್ರಿ ಕಾರ್ಯಕ್ರಮದಲ್ಲಿ ಬಿಜೆಪಿಗೆ ಆಹ್ವಾನ ನೀಡಿದ ವಿಜಯೇಂದ್ರ !

ನನಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಹ್ವಾನ ಬಂದಿದ್ದು ನಿಜ. ಫ್ಯಾಮಿಲಿ ಜೊತೆ ಮಾತಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಡಾ.ಸಿ.ಎನ್. ಮಂಜುನಾಥ್‌ ಹೇಳಿದ್ದಾರೆ.

First Published Mar 9, 2024, 11:08 AM IST | Last Updated Mar 9, 2024, 11:09 AM IST

ಶಾಸಕ ಮುನಿರತ್ನ ಆಯೋಜಿಸಿದ್ದ ಶಿವರಾತ್ರಿ(Shivaratri Festival) ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ವೇದಿಕೆ ಮೇಲೆಯೇ ಡಾ.ಸಿ.ಎನ್. ಮಂಜುನಾಥ್‌(Dr. C.N.Manjunath) ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ. ಕಾರ್ಯಕ್ರಮದ ವೇದಿಕೆ ಮೇಲೆಯೇ ಬಿಜೆಪಿಗೆ ಆಹ್ವಾನಿಸಲಾಗಿದೆ. ನಿಮ್ಮಂತಹ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು ಎಂದು ಹೇಳುವ ಮೂಲಕ ವೇದಿಕೆ ಮೇಲೆಯೇ ಬಿಜೆಪಿಗೆ(BJP) ಆಹ್ವಾನಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಈ ಬಗ್ಗೆ ಮಾತನಾಡಿದ ಡಾ.ಸಿ.ಎನ್. ಮಂಜುನಾಥ್‌, ನನಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಹ್ವಾನ ಬಂದಿದ್ದು ನಿಜ. ಫ್ಯಾಮಿಲಿ ಜೊತೆ ಮಾತಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಈ ಹಿಂದೆಯೂ ಹಲವು ಬಾರಿ ಆಹ್ವಾನ ಮಾಡಿದ್ರು. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನನಗಿನ್ನೂ ಸಮಯ ಬೇಕು ಎಂದು ಹೇಳುವ ಮೂಲಕ ಸ್ಪರ್ಧೆ ಬಗ್ಗೆ ಗುಟ್ಟು ಬಿಟ್ಟು ಕೊಡದ ಡಾ. ಸಿ.ಎನ್ ಮಂಜುನಾಥ್.

ಇದನ್ನೂ ವೀಕ್ಷಿಸಿ:  ಸುನೀಲ್ ಕನುಗೋಳು ಸರ್ವೇಯಲ್ಲೂ ಕಾಂಗ್ರೆಸ್‌ಗೆ ಒಂದಂಕಿ‌ ಸೀಟ್..! ಜಾತಿ ಸಮೀಕರಣ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಲು ಸೂಚನೆ