
Morning Express: ಏ.10ರಿಂದ ರಾಮರಥ ಯಾತ್ರೆ: ಸಿಎಂ ಬೊಮ್ಮಾಯಿ, ಬಿಎಸ್‌ವೈ ಚಾಲನೆ
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಕ್ವಿಕ್ ರೌಂಡಪ್ ಮಾರ್ನಿಂಗ್ ಎಕ್ಸಪ್ರೆಸ್‌ನಲ್ಲಿ
ಬೆಂಗಳೂರೂ (ಏ. 08): ಹಿಜಾಬ್, ಹಲಾಲ್ ವಿವಾದದ ಮಧ್ಯೆ ಏಪ್ರಿಲ್ 10 ರಿಂದ ನಡೆಯಲಿರುವ ರಾಮರಥ ಯಾತ್ರೆ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ (R Ashok) ಮಾಹಿತಿ ನೀಡಿದ್ದಾರೆ. ಪದ್ಮನಾಭನಗರದಿಂದ ಯಾತ್ರೆ ಆರಂಭವಾಗಲಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ ಎಸ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.ಇನ್ನು ಮುಂದಿನ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸಿದೆ.
ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ದಳಪತಿಗಳು ಇಬ್ರಾಹಿಂ ಬೆನ್ನಲ್ಲೇ ಮತ್ತೊಬ್ಬ ಮುಸ್ಲಿಂ ನಾಯಕನಿಗೆ ಗಾಳ ಹಾಕಿದೆ. ಸದ್ಯ ಇಬ್ರಾಹಿಂ ರೋಷನ್ ಬೇಗ ಭೇಟಿಯಾದ ಫೋಟೋ ವೈರಲ್ ಆಗಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ "ಅವರ ಬಗ್ಗೆ ಮಾತಾಡಿ ಏನಯ ಪ್ರಯೋಜನʼಎಂದು ಹೇಳಿದ್ದಾರೆ.
ಇದನ್ನೂ ಓದಿ:Hijab Controversy: ಉಗ್ರ ಸಂಘಟನೆಗಳ ಉಪದೇಶ ನಮಗೆ ಅವಶ್ಯವಿಲ್ಲ: ಸಲೀಂ
ಹಿಂದೂ-ಮುಸಲ್ಮಾನರ ಭಾವೈಕೈತೆ, ಸಾಮರಸ್ಯದ ಸಂಕೇತವಾಗಿ ನಡೆದು ಬಂದ ಆಚರಣೆಯಂತೆ ಮುಂದುವರೆಸುವುದಕ್ಕೆ ಉತ್ಸವ ಸಮಿತಿ ನಿರ್ಧರಿಸಿದೆ. ಹಿಜಾಬ್, ಹಲಾಲ್ ಕಟ್, ಮುಸ್ಲಿಂ ವರ್ತಕರಿಗೆ ನಿರ್ಬಂಧ, ಮುಸ್ಲಿಂ ಕೆತ್ತನೆಯ ಮೂರ್ತಿ ಪ್ರತಿಷ್ಠಾಪಿಸದಂತೆ ಅಭಿಯಾನ ಸೇರಿದಂತೆ ಧರ್ಮ ಆಧಾರಿತ ಸಂಘರ್ಷಗಳು ಆರಂಭವಾಗಿವೆ. ಹೀಗಾಗಿ, ಈ ಬಾರಿ ದರ್ಗಾಕ್ಕೆ ಕರಗ ಮೆರವಣಿಗೆ ಭೇಟಿ ಸಾಧ್ಯವೋ, ಇಲ್ಲವೋ ಎಂಬ ಅನುಮಾನ ಮೂಡಿತ್ತು. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ಕ್ವಿಕ್ ರೌಂಡಪ್ ಮಾರ್ನಿಂಗ್ ಎಕ್ಸಪ್ರೆಸ್‌ನಲ್ಲಿ