Asianet Suvarna News Asianet Suvarna News

ಕೇಂದ್ರಕಾಯ್ದೆ ವಿರುದ್ಧ ಕಾಂಗ್ರೆಸ್ ಕಹಳೆ, ಕಿಸಾನ್ ಕಿಚ್ಚು, ರಾಜಧಾನಿ ಸ್ಥಬ್ಧ..!

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಮತ್ತೆ ಸಮರ ಶುರುವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ರಾಜ್ಯ ರಾಜಧಾನಿಯಲ್ಲಿ  ಇಂದಿನಿಂದ ಹೋರಾಟ ಶುರು ಮಾಡಿದ್ದಾರೆ. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಜ. 20): ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಮತ್ತೆ ಸಮರ ಶುರುವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ರಾಜ್ಯ ರಾಜಧಾನಿಯಲ್ಲಿ  ಇಂದಿನಿಂದ ಹೋರಾಟ ಶುರು ಮಾಡಿದ್ದಾರೆ. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೈತರ ಪರ ನಮ್ಮ ಹೋರಾಟ ಮುಂದುವರೆಯುತ್ತದೆ: ಈಶ್ವರ ಖಂಡ್ರೆ

'ನಮ್ಮ ಪಕ್ಷ ಯಾವಾಗಲೂ ರೈತರ ಪರ. ರೈತರಿಗೆ ಅನ್ಯಾಯವಾದ್ರೆ ನಾನು ಅವರ ಪರ ಧ್ವನಿ ಎತ್ತುತ್ತೇವೆ. ಬೇರೆ ಬೇರೆ ಕಡೆಗಳಿಂದ ರೈತರು ಬರುವುದನ್ನು ಪೊಲೀಸರು ತಡೆಯುತ್ತಿದ್ದಾರೆ. ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ. ಇದು ಸರಿಯಲ್ಲ. ರೈತರನ್ನು ತಡೆಯುವ ಹಕ್ಕು ಅವರಿಗಿಲ್ಲ' ಅಂತ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.