Corona Song: 'ಕಾಣದ ಕಡಲಿಗೆ' ಹಾಡಿನ ದಾಟಿಗೆ ನ್ಯಾಯಾಧೀಶರಿಂದ ಕೊರೋನಾ ಹಾಡು

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಉಚ್ಚ ನ್ಯಾಯಾಲಯದ ಆದೇಶದಂತೆ ಕೋರ್ಟ್‌ನಲ್ಲಿ ಕೆಲ ನಿಯಮಗಳನ್ನ ಜಾರಿಗೆ ತಂದಿರುವುದಾಗಿ ಹೇಳಿದರು. 

First Published Jan 21, 2022, 9:42 PM IST | Last Updated Jan 21, 2022, 9:42 PM IST

ರಾಯಚೂರು (ಜ.21): ಜಿಲ್ಲೆಯಲ್ಲಿ ಕೊರೋನಾ (Coronavirus) ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ (Mallikarjuna Gowda) ಉಚ್ಚ ನ್ಯಾಯಾಲಯದ ಆದೇಶದಂತೆ ಕೋರ್ಟ್‌ನಲ್ಲಿ ಕೆಲ ನಿಯಮಗಳನ್ನ ಜಾರಿಗೆ ತಂದಿರುವುದಾಗಿ ಹೇಳಿದರು. ಜನರ ರಕ್ಷಣೆಗೆ ಸಾಕ್ಷಿ ಪಡೆಯೋದನ್ನು ತಡೆಹಿಡಿಯಲಾಗಿದೆ. ತುರ್ತು ಕೇಸ್‌ಗಳಷ್ಟೇ ವಿಚಾರಣೆ ಮಾಡಲಾಗುವುದು. ಕೊರೋನಾ ಅನ್ನೊದು ಬೆಂಕಿ, ಅದರ ಜೊತೆ ಸೆಣಸಾಡೋದು ಬೇಡ. 

Weekend Curfew Lifts ಎರಡು ವಾರ ನಷ್ಟ ಅನುಭವಿಸಿದ್ದ ಉದ್ದಿಮೆಗಳಿಗೆ ಬಿಗ್ ರಿಲೀಫ್

ನಾವೇ ಅದರಿಂದ ದೂರ ಉಳಿದುಬಿಡೋಣ. ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಔಷಧಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್‌ಗೆ ಸಿದ್ಧರಿರಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಎಸ್‌ಪಿ ಅವರಿಗೂ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದರು. ಇದೇ ವೇಳೆ 'ಕಾಣದ ಕಡಲಿಗೆ' ಹಾಡಿನ ದಾಟಿಗೆ  ಕೊರೋನಾ ವಿಷಯದ ಬಗ್ಗೆ ಸ್ವತಃ ತಾವೇ ಬರೆದ ಹಾಡು (Corona Song) ಹಾಡಿದರು. 'ಕಾಣದ ಕ್ರಿಮಿಗೆ ಹೆದರಿದೆ‌ ಜನ, ರಕ್ಷಿಸಿಕೊಳ್ಳಬಹುದು ನಮ್ಮನ' ಎಂದು ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹಾಡಿದರು.

Video Top Stories