ಕರ್ನಾಟಕದ ಡೀಲ್ ಪುರಾಣ ಲೋಕಾ ದಾಳಿಯಲ್ಲಿ ಬಯಲು, ಬಿಜೆಪಿ ನಾಯಕನ ಹೊಡೆತಕ್ಕೆ ಸರ್ಕಾರ ಕಂಗಾಲು!
ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ ಬಿಜೆಪಿ, ಪ್ರಿಯಾಂಕ್ ಖರ್ಗೆ ಆರೋಪ, ಲೋಕಾಯುಕ್ತ ದಾಳಿ ಕುರಿತು ನ್ಯಾ.ಬಿಎಸ್ ಪಾಟೀಲ್ ಹೇಳಿದ್ದೇನು?, ಬಿಜೆಪಿ ಶಾಸಕನ ಪುತ್ರನ ಕಚೇರಿ, ಮನೆಯಿಂದ 8 ಕೋಟಿ ರೂಪಾಯಿ ಹಣ ವಶ! ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
18 ಗಂಟೆ ಶೋಧ, 8 ಕೋಟಿ ರೂಪಾಯಿ ಸೀಜ್, ಐವರು ಆರೆಸ್ಟ್. ಇದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ಈ ಪ್ರಕರಣ ದಿನದಿಂದ ದಿನಕ್ಕೆ ಬಿಜೆಪಿ ಪುರಾಣ ಬಯಲು ಮಾಡುತ್ತಿದೆ.ರಾಜ್ಯದಲ್ಲಿ ಬ್ರಷ್ಟಾಚಾರ ಆರೋಪ ಪ್ರತ್ಯಾರೋಪಗಳು ಮಾತ್ರ ಕೇಳಿಬರುತ್ತಿದೆ.ಇದೀಗ ಬಿಜೆಪಿ ನಾಯಕರೇ ಕಾಂಗ್ರೆಸ್‌ಗೆ ದಾಖಲೆ ನೀಡಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ತಂದಿಟ್ಟಿದೆ. ಬ್ರಹ್ಮಾಸ್ತ್ರ ಪಡೆದ ಕಾಂಗ್ರೆಸ್ ಇದೀಗ ಪ್ರಶ್ನೆಗಳ ಮೇಲೆ ಪ್ರಶ್ನೆ ಸುರಿಸಿದೆ. ಬಿಜೆಪಿ ಉತ್ತರಿಸಲಾಗದೇ ಕಂಗಾಲಾಗಿದೆ.ಬಿಜೆಪಿಯವರು ವಿಧಾನಸೌಧವನ್ನು ವ್ಯಾಪಾರ ಸೌಧವಾಗಿ ಮಾಡಿದ್ದಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ಇನ್ನೆಷ್ಟು ದಾಖಲೆ ಬೇಕು? ಈಗ ಯಾರು ರಾಜೀನಾಮೆ ಕೊಡ್ತಾರೆ? ಎಂದು ಕಾಂಗ್ರೆಸ್ ನಾಯಕರು ಸತತ ವಾಗ್ದಾಳಿ ನಡೆಸಿದ್ದಾರೆ.