Asianet Suvarna News Asianet Suvarna News

ಅಭಿಮಾನಿಗಳಿಗೆ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ, ಅಪ್ಪು ಆಸೆ ಈಡೇರಿಸಿದ ರಾಜ್ ಕುಟುಂಬ..!

Nov 10, 2021, 4:35 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ನ. 10): ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಪುಣ್ಯ ತಿಥಿಯ ಅಂಗವಾಗಿ ರಾಜ್‌ಕುಮಾರ್‌ ಕುಟುಂಬದಿಂದ ನಡೆದ ಅನ್ನ ಸಂತರ್ಪಣೆ ರಾಜ್ಯ ನಾನಾ ಭಾಗಗಳಿಂದ ಬಂದ ಸುಮಾರು 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪಾಲ್ಗೊಂಡಿದ್ದರು.  ಏಕಕಾಲಕ್ಕೆ ಸುಮಾರು ಐದು ಸಾವಿರ ಮಂದಿ ಊಟ ಮಾಡುವ ಹಾಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಘೀ ರೈಸ್‌, ಅನ್ನ, ಸಾಂಬರ್‌, ಅಕ್ಕಿ ಪಾಯಸ, ವಡೆ, ಚಿಕನ್‌ ಕಬಾಬ್‌, ಮಸಾಲಾ ರೈಸ್‌ ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲಾಗಿತ್ತು.

26 ಅನಾಥಾಶ್ರಮ, 16 ವೃದ್ಧಾಶ್ರಮ, 45 ಶಾಲೆಗಳನ್ನು ನಿರ್ವಹಿಸುತ್ತಿದ್ದರು ಅಪ್ಪು..!

'ಅಭಿಮಾನಿಗಳಿಗೆ ಊಟ ಹಾಕಿಸಬೇಕು ಎಂಬುದು ಪುನೀತ್‌ ಆಸೆ. ಅವನ ಆಸೆಯನ್ನು ಈಡೇರಿಸುತ್ತಿದ್ದೇವೆ. ಕಳೆದ ಒಂದು ವಾರದಿಂದ ಅಭಿಮಾನಿಗಳು ಶೋಕದಲ್ಲಿದ್ದಾರೆ. ಎಲ್ಲರೂ ಸಂತಾಪ ಸೂಚಿಸಿದ್ದಾರೆ. ನಮ್ಮ ಕುಟುಂಬದ ಜತೆಗೆ ಇದ್ದರು. ಇನ್ನು ಅಪ್ಪು ಮಾಡುತ್ತಿದ್ದ ಕೆಲಸಗಳನ್ನು ನಾವೆಲ್ಲ ಸೇರಿ ಮುಂದುವರಿಸಬೇಕಾಗಿದೆ. ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ನಾವು ಚಿರಋುಣಿ' ಎಂದು ರಾಘವೇಂದ್ರ ರಾಜ್‌ಕುಮಾರ್ ಕೈ ಮುಗಿದರು.