PSI Recruitment Scam: ಅಭ್ಯರ್ಥಿಗಳಿಗೆ ಸಿಐಡಿ ಡ್ರಿಲ್‌, ಪ್ರತಿದಿನ 50 ಮಂದಿ ವಿಚಾರಣೆ

PSI ಅಕ್ರಮ ನೇಮಕಾತಿ ಪ್ರಕರಣ (PSI Recruitment Scam) ಸಂಬಂಧ ಈಗ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಐಡಿ (CID) ತನಿಖೆ ಬಿಸಿ ತಟ್ಟಿದ್ದು ಮೊದಲ ಹಂತದಲ್ಲಿ 50 ಮಂದಿ ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವಿಚಾರಣೆ ಮುಂದುವರೆಯಲಿದ್ದು, ಗುರುವಾರ ಮತ್ತೆ 50ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಬುಲಾವ್‌ ನೀಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಏ. 21): PSI ಅಕ್ರಮ ನೇಮಕಾತಿ ಪ್ರಕರಣ (PSI Recruitment Scam) ಸಂಬಂಧ ಈಗ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಐಡಿ (CID) ತನಿಖೆ ಬಿಸಿ ತಟ್ಟಿದ್ದು ಮೊದಲ ಹಂತದಲ್ಲಿ 50 ಮಂದಿ ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವಿಚಾರಣೆ ಮುಂದುವರೆಯಲಿದ್ದು, ಗುರುವಾರ ಮತ್ತೆ 50ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಬುಲಾವ್‌ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಸೀದಿಗಳಲ್ಲಿ ಮದ್ದುಗುಂಡು ಸಂಗ್ರಹಿಸಿಡ್ತಾರೆ, ಶೋಧ ನಡೆಸಿ, ಮದರಸಾ ಬ್ಯಾನ್ ಮಾಡಿ: ರೇಣುಕಾಚಾರ್ಯ

ಸಿಐಡಿ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ಒಬ್ಬೊಬ್ಬರಾಗಿ ಅಭ್ಯರ್ಥಿಗಳು ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಒಎಂಆರ್‌ ಶೀಟ್‌ ಸೇರಿದಂತೆ ಕೆಲ ದಾಖಲೆಗಳನ್ನು ಪರಾಂಬರಿಸಿರುವ ಸಿಐಡಿ ಅಧಿಕಾರಿಗಳು, ಮುಂದಿನ ಹಂತದಲ್ಲಿ ತನಿಖೆ ವೇಳೆ ಅನುಮಾನ ಬಂದರೆ ವಿಚಾರಣೆಗೆ ಬರಬೇಕು ಎಂದು ಸೂಚಿಸಿ ಅಭ್ಯರ್ಥಿಗಳನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ನೇಮಕಾತಿಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಆಯ್ಕೆಯಾಗಿದ್ದ 545 ಅಭ್ಯರ್ಥಿಗಳಿಗೆ ಒಎಂಆರ್‌ ಪ್ರತಿ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ ಜಾರಿಗೊಳಿಸಿದೆ. 

Related Video