PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

 ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.
 

First Published Apr 23, 2022, 2:45 PM IST | Last Updated Apr 23, 2022, 3:14 PM IST

ಬೆಂಗಳೂರು (ಏ. 23):  ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ (PSI Recruitment) ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.

ಆಡಿಯೋ ರಿಲೀಸ್ ಮಾಡಿದ ಪ್ರಿಯಾಂಕ್ ಖರ್ಗೆ; ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹ

545 ಪಿಎಸ್‌ವೈ ಪರೀ​ಕ್ಷೆ​ಯ​ಲ್ಲಿನ ಅಕ್ರ​ಮದ ಹಿನ್ನೆ​ಲೆ​ಯ​ಲ್ಲಿ ಕಳೆದ ವರ್ಷ ಹೊರಡಿಸಿದ್ದ ಅಧಿಸೂಚನೆಯಂತೆ, ಇದೇ ಫೆಬ್ರವರಿ ಕೊನೇ ವಾರ ನಡೆಯಲಿದ್ದ 402 ಪಿಎಸ್‌ಐ ನೇಮಕಾತಿ ಪರೀ​ಕ್ಷೆ​ಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಆದರೆ, ಇದೀಗ ವಾಟ್ಸಪ್‌ನಲ್ಲಿ ಆಡಿಯೋವೊಂದು ಹರಿ​ದಾ​ಡು​ತ್ತಿದ್ದು, ಅದರಲ್ಲಿ 402 ಪಿಎ​ಸ್‌ಐ ಹುದ್ದೆ​ಗ​ಳ ನೇಮ​ಕಾ​ತಿ​ಯಲ್ಲೂ ಅಕ್ರಮದ ವಿಚಾರ ಪ್ರಸ್ತಾ​ಪ​ವಾ​ಗಿದೆ. 

'ನಾವು ಉತ್ತಮ ರೀತಿಯಲ್ಲಿ ಓದಿಕೊಂಡು, ಪರೀಕ್ಷೆ ಬರೆಯಲು ಸಜ್ಜಾಗಿದ್ದೆವು. ಆಗ ಅಕ್ರಮ ಆಗಿರುವ ಬಗ್ಗೆ ನಮೆಗೆಲ್ಲಾ ಅನುಮಾನ ಬಂತು, ಪೇಪರ್‌ನಲ್ಲಿಯೂ ವಿಚಾರ ಬಂತು. ನಾವು ಹೋಂ ಮಿನಿಸ್ಟರ್ ಗಮನಕ್ಕೆ ತಂದಾಗ ಅಕ್ರಮದ ಬಗ್ಗೆ ಪ್ರೂಫ್ ಕೊಡಿ ಅಂತಾರೆ, ಸರ್ಕಾರದ ತನಿಖಾ ಸಂಸ್ಥೆಗಳು ಇದ್ದಾಗ್ಯೂ ನಾವೇ ಪ್ರೂಫ್ ಕೊಡ್ಬೇಕಾ..? ಎಂದು ನೊಂದ ಅಭ್ಯರ್ಥಿ ರವಿಶಂಕರ್, ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.