Night Curfew: ಅವಧಿ ಕಡಿತಗೊಳಿಸಿ, ಸರ್ಕಾರದ ಮೇಲೆ ಉದ್ಯಮಿಗಳ ಒತ್ತಡ, ಸಿಎಂ ಭೇಟಿಗೆ ನಿರ್ಧಾರ
ನೈಟ್ ಕರ್ಫ್ಯೂ ಅವಧಿ (Night Curfew) ಹಾಗೂ 50:50 ರೂಲ್ಸನ್ನು ಪರಿಶೀಲನೆ ಮಾಡಿ ಎಂದು ವಿವಿಧ ಕ್ಷೇತ್ರದ ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಮುಂದಿನ ವಾರ ಸಿಎಂ ಬೊಮ್ಮಾಯಿ (CM Bommai) ಭೇಟಿಗೆ ನಿರ್ಧರಿಸಿದ್ದಾರೆ.
ಬೆಂಗಳೂರು (ಜ. 23): ನೈಟ್ ಕರ್ಫ್ಯೂ ಅವಧಿ (Night Curfew) ಹಾಗೂ 50:50 ರೂಲ್ಸನ್ನು ಪರಿಶೀಲನೆ ಮಾಡಿ ಎಂದು ವಿವಿಧ ಕ್ಷೇತ್ರದ ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಮುಂದಿನ ವಾರ ಸಿಎಂ ಬೊಮ್ಮಾಯಿ (CM Bommai) ಭೇಟಿಗೆ ನಿರ್ಧರಿಸಿದ್ದಾರೆ. ನಮಗೂ ವಿನಾಯ್ತಿ ಕೊಡಿ ಎಂದು ಕಲ್ಯಾಣ ಮಂಟಪ ಮಾಲಿಕರು ಒತ್ತಾಯಿಸಿದ್ದಾರೆ.
ಸರ್ಕಾರಿ ಕಚೇರಿಗಳಿಂದ ಕೋಟಿಗಟ್ಟಲೇ ಬಿಲ್ ಬಾಕಿ, ವಿದ್ಯುತ್ ದರ ಏರಿಕೆಗೆ ಚಿಂತನೆ, ನ್ಯಾಯಾನ ಸ್ವಾಮಿ?
ವಾರಾಂತ್ಯದ ಕಫ್ರ್ಯೂ (Weekend Curfew) ನಾಡಿನಾದ್ಯಂತ ರದ್ದುಗೊಳಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ತರಗತಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ, ಹಾಲಿ ಜಾರಿಯಲ್ಲಿರುವ ರಾತ್ರಿ ಕಫ್ರ್ಯೂ ಮತ್ತು ಚಿತ್ರಮಂದಿರ, ಪಬ್, ಬಾರ್, ಹೋಟೆಲ್ ಮತ್ತಿತರ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಸಾಮರ್ಥ್ಯದ ಶೇ.50ರಷ್ಟು ಮಿತಿ. ರಾರಯಲಿ, ಪ್ರತಿಭಟನೆ ನಿಷೇಧ ಸೇರಿದಂತೆ ಉಳಿದೆಲ್ಲಾ ನಿರ್ಬಂಧ ಯಥಾವತ್ ಮುಂದುವರಿಕೆಯಾಗಿದೆ.