ಸರ್ಕಾರಿ ಕಚೇರಿಗಳಿಂದ ಕೋಟಿಗಟ್ಟಲೇ ಬಿಲ್ ಬಾಕಿ, ವಿದ್ಯುತ್ ದರ ಏರಿಕೆಗೆ ಚಿಂತನೆ, ನ್ಯಾಯಾನ ಸ್ವಾಮಿ?
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆ ಮಾತಿನಂತೆ ವರ್ತಿಸುತ್ತಿದೆ ಹೆಸ್ಕಾಂ (HESCOM) 546 ಕೋಟಿ ಬಾಕಿ ಉಳಿಸಿಕೊಂಡ ಹೆಸ್ಕಾಂ, ನಷ್ಟ ಸರಿದೂಗಿಸಲು ವಿದ್ಯುತ್ ದರ ಹೆಚ್ಚಿಸಲು ಪ್ಲ್ಯಾನ್ ಮಾಡಿದೆ.
ಬೆಂಗಳೂರು (ಜ. 23): ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆ ಮಾತಿನಂತೆ ವರ್ತಿಸುತ್ತಿದೆ ಹೆಸ್ಕಾಂ (HESCOM) 546 ಕೋಟಿ ಬಾಕಿ ಉಳಿಸಿಕೊಂಡ ಹೆಸ್ಕಾಂ, ನಷ್ಟ ಸರಿದೂಗಿಸಲು ವಿದ್ಯುತ್ ದರ (Tariff Plan) ಹೆಚ್ಚಿಸಲು ಪ್ಲ್ಯಾನ್ ಮಾಡಿದೆ. ವಸೂಲಿ ಮಾಡಿ ಜನರ ಮೇಲೆ ಹೊರೆ ಹಾಕಬೇಡಿ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
Karnataka Power Tariff: ದರ ಏರಿಕೆ ವಿರೋಧಿಸಿದ ಸಿದ್ದರಾಮಯ್ಯ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ 42 ಕೋಟಿ, ಬೆಳಗಾವಿ ಪಾಲಿಕೆಯಿಂದ 53 ಕೋಟಿ ಬಾಕಿ, ಸ್ಥಳೀಯ ಸಂಸ್ಥೆಗಳಿಂದ 129 ಕೋಟಿ ರೂ ಬಾಕಿ ಇದೆ. ಈ ಎಲ್ಲಾ ನಷ್ಟ ಸರಿದೂಗಿಸಲು ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.