ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ; ಎಸ್‌ಐಟಿ ವಿಚಾರಣೆಗೆ ಕರೆದರೆ ಆತ್ಮಹತ್ಯೆ ಮಾಡಿಕೊಳ್ತೀವಿ ಎಂದ ಸಂತ್ರಸ್ತೆಯರು
ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದಲ್ಲಿರುವ ಸಂತ್ರಸ್ತ ಮಹಿಳೆಯರು ತಮ್ಮನ್ನು ಎಸ್‌ಐಟಿ ತಂಡದಿಂದ ವಿಚಾರಣೆಗೆ ಕರೆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಬೆಂಗಳೂರು (ಮೇ 01): ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋದಲ್ಲಿರುವ ಮಹಿಳೆಯರನ್ನು ಎಸ್‌ಯಟಿ ತಂಡದಿಂದ ಕರೆತಂದು ಹೇಳಿಕೆ ಪಡೆಯಲು ಮುಂದಾಗಿದೆ. ಆದರೆ, ಸಂತ್ರಸ್ತ ಮಹಿಳೆಯರು ನಾವು ಹೇಳಿಕೆ ಕೊಡುವುದಿಲ್ಲ. ನಮ್ಮನ್ನು ಮತ್ತೊಮ್ಮೆ ವಿಚಾರಣೆ ಅಥವಾ ತನಿಖೆಗೆ ಕರೆದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋದಲ್ಲಿರುವ ಸಂತ್ರಸ್ತ 10 ಮಹಿಳೆಯರನ್ನು ಎಸ್‌ಐಟಿ ತಂಡದಿಂದ ಹುಡುಕಿ ವಿಚಾರಣೆಗೆ ಕರೆದು ತರಲಾಗಿದೆ. ಆದರೆ, ಎಸ್‌ಐಟಿ ಹಲವು ಸಂತ್ರಸ್ತ ಮಹಿಳೆಯರನ್ನು ಕರೆದುತಂದು ಪ್ರಜ್ವಲ್ ರೇವಣ್ಣ ಅವರಿಂದ ಕಿರುಕುಳ ನಿಡಲಾದ ಬಗ್ಗೆ ಹೇಳಿಕೆ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಸಂತ್ರಸ್ತ ಮಹಿಳೆಯರು ಎಸ್‌ಐಟಿ ತಂಡದ ಮುಂದೆ ಯಾರೊಬ್ಬರೂ ಹೇಳಿಕೆ ಕೊಡಲು ಮುಂದಾಗಿಲ್ಲ. ಇನ್ನು ನಾವು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಆದರೂ ನಮ್ಮನ್ನು ನೀವು ಯಾಕೆ ಕರೆದುಕೊಂಡು ಬಂದು ವಿಚಾರಣೆ ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ. ನೀವೇನಾದರೂ ನಮ್ಮನ್ನು ಬಲವಂತವಾಗಿ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸುವುದಕ್ಕೆ ಮುಂದಾದದಲ್ಲಿ ನಾವು ಆತ್ಮಹತ್ಯೆಯ ದಾರಿಯನ್ನು ಹಿಡಿಯಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ಸಂತ್ರಸ್ತ ಮಹಿಳೆಯರಿಂದ ಎಸ್‌ಐಟಿ ತಂಡವು ಪ್ರಜ್ವಲ್ ರೇವಣ್ಣ ವಿರುದ್ಧ ಯಾವುದೇ ದೂರು ಅಥವಾ ಹೇಳಿಕೆ ಪಡೆಯುವಲ್ಲಿ ವಿಫಲವಾಗಿದೆ.
ಸಂಸದ ಪ್ರಜ್ವಲ್ ರೇವಣ್ಣರನ್ನು ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಬಂಧಿಸಲು ಸಾಧ್ಯವಿಲ್ಲ; ವಕೀಲ ಸುಧನ್ವ ಮಾಹಿತಿ
ದೂರುದಾರ ಮಹಿಳೆಯಿಂದ ಹೇಳಿಕೆ: ಇನ್ನು ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಹೆಚ್.ಡಿ. ರೇವಣ್ಣ ಅವರ ವಿರುದ್ಧ ಹೊಳೆನರಸೀಪುರದಲ್ಲಿ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ ಮಹಿಳೆ ಮಾತ್ರ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ಇವರು 5 ವರ್ಷದ ನಂತರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.