ಸಂಸದ ಪ್ರಜ್ವಲ್ ರೇವಣ್ಣರನ್ನು ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಬಂಧಿಸಲು ಸಾಧ್ಯವಿಲ್ಲ; ವಕೀಲ ಸುಧನ್ವ ಮಾಹಿತಿ

ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ದಾಖಲಾದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಅವರನ್ನು ಬಂಧಿಸುವಂತಹ ಯಾವುದೇ ಕೇಸ್‌ಗಳು ದಾಖಲಾಗಿಲ್ಲ. ಅವರು ಒಂದು ಜಾಮೀನು ಅರ್ಜಿ ಹಾಕಿದರೂ ಅದನ್ನು ನಿರಾಕರಿಸುವಂತಿಲ್ಲ.

Hassan MP Prajwal Revanna obscene video case no opportunity to arrest says advocate Sudhanva sat

ಬೆಂಗಳೂರು (ಮೇ 01): ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಕುರಿತಾಗಿ ದಾಖಲಾದ ಎಫ್‌ಐಆರ್ ನೋಡಿದರೆ, ಅದರಲ್ಲಿ ಯಾವುದೇ ಗಂಭೀರ ಆರೋಪಗಳಿಲ್ಲ. ಪ್ರಜ್ವಲ್ ರೇವಣ್ಣ ಸ್ವತಃ ವಿಚಾರಣೆಗೆ ಹಾಜರಾದರೂ ಪೊಲೀಸರು ಅವರನ್ನು ಬಂಧಿಸುವುದಕ್ಕೆ ಅವಕಾಶವಿಲ್ಲ. ಆರೋಪಿಗಳು ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದರೆ ಅದನ್ನು ನಿರಾಕರಿಸಲೂ ಅವಕಾಶವಿಲ್ಲ ಎಂದು ಕಾನೂನು ತಜ್ಞರಾದ ವಕೀಲ ಸುಧನ್ವ ಮಾಹಿತಿ ನೀಡಿದರು.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತಾಗಿ ಮಾತನಾಡಿದ ಅವರು, ನಾನು ಎಫ್‌ಐಆರ್ ನೋಡಿದೆ. ಅದರಲ್ಲಿ 354ಎ ಮತ್ತು 354ಡಿ ಸೆಕ್ಷನ್ ಅನ್ವಯ ಕೇಸ್ ದಾಖಲಿಸಲಾಗಿದೆ. ಕೇಸ್‌ ರಿಜಿಸ್ಟರ್ ಮಾಡಿದ ಎಲ್ಲ ಸೆಕ್ಷನ್‌ಗಳೂ ಕೂಡ ಸುಲಭವಾಗಿ ಜಾಮೀನು ಪಡೆದುಕೊಳ್ಳಬಹುದು. ಈ ಕೇಸ್‌ನಲ್ಲಿ ಅತಿಹೆಚ್ಚು ಅಂದರೆ ಕೇವಲ 3 ವರ್ಷಗಳ ಶಿಕ್ಷೆ ಪ್ರಕಟವಾಗುವ ಸಾಧ್ಯತೆಯಿದೆ. ಪೊಲೀಸರು ನೋಟಿಸ್ ಜಾರಿಗೊಳಿಸಿದ ನಂತರ ಆರೋಪಿ ಪ್ರಜ್ವಲ್ ರೇವಣ್ಣ ನೇರವಾಗಿ ವಿಚಾರಣೆಗೆ ಹಾಜರಾದರೂ ಅವರನ್ನು ಪೊಲೀಸರು ಬಂಧಿಸುವಂತಿಲ್ಲ. ಜೊತೆಗೆ, ಪ್ರಜ್ವಲ್ ಅವರು ವಿಚಾರಣಾ ಅಧಿಕಾರಿಗಳ ಮುಂದೆಯೇ ಜಾಮೀನು ಪಡೆದುಕೊಳ್ಳಬಹುದು. ಇಲ್ಲವೆಂದರೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡ ನಂತರ ವಿಚಾರಣೆಗೆ ಹಾಜರಾಗುವುದಕ್ಕೆ ಅವಕಾಶವಿದೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ಬೇಲ್‌ಗೆ ಅಪ್ಲೈ ಮಾಡಿಲ್ಲ; ವಿಚಾರಣೆಗೆ ಹಾಜರಾಗ್ತೀನಿ ಎಂದಿದ್ದಾರೆ: ವಕೀಲ ಅರುಣ್ ಮಾಹಿತಿ

ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿರುವುದು ಗಂಭೀರವಾದಂತಹ ಪ್ರಕರಣವಲ್ಲ. ಆದರೆ, ಬೇರೆ ಯಾವುದೇ ಸಂತ್ರಸ್ತರು ತಮ್ಮ ಒಪ್ಪಿಗೆ ಇಲ್ಲದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದರೆ ಮಾತ್ರ 376 ಸೆಕ್ಷನ್ ಅನ್ವಯ ಅತ್ಯಾಚಾರ ಪ್ರಕರಣ ದಾಖಲಾಗುತ್ತದೆ. ಆಗ ಅವರಿಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗುತ್ತದೆ. ಈಗ ಪೊಲೀಸರು ಒಂದು, ಎರಡು ಅಥವಾ ಮೂರು ನೋಟಿಸ್ ಮಾತ್ರವಲ್ಲದೇ ಎಷ್ಟೇ ನೋಟಿಸ್ ಕೊಟ್ಟರೂ ಹಾಜರಾಗದಿದ್ದರೂ ಬಂಧಿಸುವಂತಿಲ್ಲ. ಜೊತೆಗೆ, ಆರೋಪಿ ತಲೆಮರೆಸಿಕೊಂಡಿದ್ದರೂ ಕೂಡ ಬಂಧನಕ್ಕೆ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.

ಯಾರು ಈ ವಿಡಿಯೋ ಹಂಚಿಕೆ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿ ಆರೋಪಿ ಮತ್ತು ಮಹಿಳೆ ಇಬ್ಬರೂ ಒಪ್ಪಿಗೆ ಆಧಾರದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಅದನ್ನು ವಿಡಿಯೋ ರೆಕಾರ್ಡ್ ಮಾಡಿ ಜನರಿಗೆ ಲೀಕ್ ಮಾಡಿದ್ದಾರೋ ಅವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗುತ್ತದೆ. ವಿಡಿಯೋ ರೆಕಾರ್ಡಿಂಗ್ ಮತ್ತು ವಿಡಿಯೋ ಹಂಚಿಕೆ ಮಾಡಿದವರ ಮೇಲೆಯೂ ಗಂಭೀರ ಕೇಸ್ ದಾಖಲಿಸಬಹುದು. 

ಈ ಪ್ರಕರಣದಲ್ಲಿ ಲುಕ್ ಔಟ್ ನೋಟಿಸ್ ನೀಡುವ ಸಾಧ್ಯತೆಯಿಲ್ಲ. ಇಲ್ಲಿ ಜಾಮೀನು ರಿಜೆಕ್ಟ್ ಮಾಡುವ ಅವಕಾಶವೇ ಇಲ್ಲವೆಂದಾಗ ಧೈರ್ಯವಾಗಿಯೇ ವಿಚಾರಣೆಗೆ ಹಾಜರಾಗಬಹುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಯೋಗವು ಅಪ್ರಾಪ್ತರ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿಯೂ ವಿಚಾರಣೆ ಮಾಡುವಂತೆ ಎಸ್‌ಐಟಿಗೆ ಪತ್ರ ಬರೆದಿದೆ. ಒಂದು ವೇಳೆ ಅಪ್ರಾಪ್ತರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಲ್ಲಿ ಪೋಕ್ಸೋ ಕೇಸ್ ದಾಖಲಾಗಿ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು. ಇನ್ನು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯರು ವಿಚಾರಣೆಯನ್ನು ಎದುರಿಸಲಿಕ್ಕೂ ಮುಂದೆ ಬರುವುದಿಲ್ಲ. ಆದರೆ, ಎಸ್‌ಐಟಿ ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಮಹಿಳೆಯರು ಬೇಡವೆಂದರೂ ಬಲವಂತವಾಗಿ ಬಳಸಿಕೊಂಡಿದ್ದಾರೆ ಎಂಬುದು ಕಂಡುಬಂದಲ್ಲಿ ಸುಮೊಟೋ ಕೇಸ್ ಆಗಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದರು.

ಪ್ರಜ್ವಲ್ ರೇವಣ್ಣ ವಿದೇಶದಿಂದಲೇ ಮೊದಲ ಪ್ರತಿಕ್ರಿಯೆ; ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಸಂಸದ

ಹಾಲಿ ಸಂಸದರೂ ಆಗಿರುವ ಪ್ರಜ್ವಲ್ ರೇವಣ್ಣ ಈ ಚುನಾವಣೆಯಲ್ಲಿ ಗೆದ್ದು ಬಂದರೂ ಕೂಡ ಅವರ ರಾಜಕೀಯ ಜೀವನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಒಂದು ವೇಳೆ ಈ ಪ್ರಕರಣದಲ್ಲಿ ಆರೋಪಿಗೆ 2 ವರ್ಷಗಳ ಕಾಲ ಶಿಕ್ಷೆಯಾದಲ್ಲಿ ಮಾತ್ರ ಅವರ ಸಂಸದ ಸ್ಥಾನ ಅನರ್ಹಗೊಳ್ಳುತ್ತದೆ. ಅಲ್ಲಿಯವರೆಗೂ ಅವರ ರಾಜಕೀಯ ಸ್ಥಾನಮಾನಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಈಗ ಶಾಸಕರು ಮತ್ತು ಸಂಸದರಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಗಳು ಇರುವುದಿಂದ ಈ ಪ್ರಕರಣ ಅತ್ಯಂತ ಬೇಗನೇ ಒಂದು ವರ್ಷದೊಳಗೆ ಇತ್ಯರ್ಥವಾಗುತ್ತದೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios