ಕ್ವಾರಂಟೈನ್ ಕೇಂದ್ರದಲ್ಲಿ ಊಟ, ತಿಂಡಿ ಸರಿಯಾಗಿ ನೀಡುತ್ತಿಲ್ಲ; ಸೋಂಕಿತರ ಆಕ್ರೋಶ
ಕ್ವಾರಂಟೈನ್ ಸೆಂಟರ್‌ನಲ್ಲಿ ಅವ್ಯವಸ್ಥೆ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಮಂಡ್ಯ ಕ್ವಾರಂಟೈನ್ ಸೆಂಟರ್‌ನಲ್ಲಿರುವ ಸೋಂಕಿತರು ನಮಗೆ ಸರಿಯಾಗಿ ಊಟ, ತಿಂಡಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ (ಆ. 23): ಕ್ವಾರಂಟೈನ್ ಸೆಂಟರ್‌ನಲ್ಲಿ ಅವ್ಯವಸ್ಥೆ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಮಂಡ್ಯ ಕ್ವಾರಂಟೈನ್ ಸೆಂಟರ್‌ನಲ್ಲಿರುವ ಸೋಂಕಿತರು ನಮಗೆ ಸರಿಯಾಗಿ ಊಟ, ತಿಂಡಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿಯೇ ಕ್ವಾರಂಟೈನ್ ಕೇಂದ್ರವಿದೆ. ಅಧಿಕಾರಿಗಳು ಒಮ್ಮೆ ಇಲ್ಲಿ ಬಂದು ನೋಡಬೇಕು. ನಮಗೆ ಊಟ, ತಿಂಡಿ ಸರಿಯಾಗಿ ಕೊಡುತ್ತಿಲ್ಲ. ಟಾಯ್ಲೆಟ್ ವ್ಯವಸ್ಥೆ ಇಲ್ಲ. ಸ್ಯಾನಿಟೈಸರ್ ಇಲ್ಲ. ನಮಗೆ ಮಾತ್ರೆಗಳನ್ನು ಕೊಡಿ. ಮನೆಯಲ್ಲೇ ಕ್ವಾರಂಟೈನ್ ಆಗುತ್ತೇವೆ. ಕೊರೊನಾ ಹೆಸರಲ್ಲಿ ನಮಗೆ ಅವಮಾನ ಮಾಡಬೇಡಿ' ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ವೈದ್ಯರಿಗೆ ಟಾರ್ಗೆಟ್ ಫಿಕ್ಸ್ ಮಾಡುವುದು ಸರಿಯಲ್ಲ'; ವೈದ್ಯಾಧಿಕಾರಿಗಳ ಒತ್ತಾಯ