'ವೈದ್ಯರಿಗೆ ಟಾರ್ಗೆಟ್ ಫಿಕ್ಸ್ ಮಾಡುವುದು ಸರಿಯಲ್ಲ' ವೈದ್ಯರ ಆಗ್ರಹ
'ವೈದ್ಯರಿಗೆ ಟಾರ್ಗೆಟ್ ಫಿಕ್ಸ್ ಮಾಡುವುದು ಸರಿಯಲ್ಲ. ಮಾರ್ಕೆಟ್‌ಗೆ ಹೋಗಿ ಸ್ವಾಬ್ ಟೆಸ್ಟ್ ತೆಗೆಯಿರಿ, ಆಟೋ ಸ್ಟ್ಟಾಂಡ್‌ಗೆ ಹೋಗಿ ಸ್ವಾಬ್ ಟೆಸ್ಟ್ ಮಾಡಿ, ಗಣಪತಿ ಪೆಂಡಾಲ್‌ಗೆ ಹೋಗಿ ಮಾಡಿ ಅಂತಾರೆ. ಆದರೆ ಇದಕ್ಕೆ ಸಾರ್ವಜನಿಕರು ಸಹಕರಿಸಲ್ಲ' ಎಂದು ವೈದ್ಯಾಧಿಕಾರಿಗಳ ಸಂಘದ ಶ್ರೀನಿವಾಸ್ ಹೇಳಿದ್ದಾರೆ.
ಬೆಂಗಳೂರು (ಆ. 23): ವೈದ್ಯರಿಗೆ ಟಾರ್ಗೆಟ್ ಫಿಕ್ಸ್ ಮಾಡುವುದು ಸರಿಯಲ್ಲ. ಮಾರ್ಕೆಟ್‌ಗೆ ಹೋಗಿ ಸ್ವಾಬ್ ಟೆಸ್ಟ್ ತೆಗೆಯಿರಿ, ಆಟೋ ಸ್ಟ್ಟಾಂಡ್‌ಗೆ ಹೋಗಿ ಸ್ವಾಬ್ ಟೆಸ್ಟ್ ಮಾಡಿ, ಗಣಪತಿ ಪೆಂಡಾಲ್‌ಗೆ ಹೋಗಿ ಮಾಡಿ ಅಂತಾರೆ. ಆದರೆ ಇದಕ್ಕೆ ಸಾರ್ವಜನಿಕರು ಸಹಕರಿಸಲ್ಲ ಎಂದು ವೈದ್ಯಾಧಿಕಾರಿಗಳ ಸಂಘದ ಶ್ರೀನಿವಾಸ್ ಹೇಳಿದ್ದಾರೆ.
ಪಾಸಿಟೀವ್ ಬಂದವರ, ಅವರ ಪ್ರಾಥಮಿಕ ಸಂಪರ್ಕದವರ ಮಾಹಿತಿಯನ್ನು ನಮ್ಮ ವೈದ್ಯರು ತೆಗೆಯುತ್ತಾರೆ. ಆದರೆ ವೈದ್ಯರಿಗೆ ನೀವು ಇಷ್ಟೇ ತೆಗೆಯಿರಿ, ಅಷ್ಟೇ ತೆಗೆಯಿರಿ ಎಂದು ಒತ್ತಡ ಹೇರುವುದು ಸರಿಯಲ್ಲ. ಇದರಿಂದ ಕೆಲಸಕ್ಕೆ ಅಡ್ಡಿಯಾಗುತ್ತದೆ. ವೈದ್ಯರಿಗೆ ಒತ್ತಡ ಹೆಚ್ಚಾಗುತ್ತದೆ' ಎಂದಿದ್ದಾರೆ.
ಡಾ. ನಾಗೇಂದ್ರ ಆತ್ಮಹತ್ಯೆ: ಮುಷ್ಕರ ಕೈ ಬಿಟ್ಟು ನಾಳೆಯಿಂದ ಕರ್ತವ್ಯಕ್ಕೆ ವೈದ್ಯರು ವಾಪಸ್