Asianet Suvarna News Asianet Suvarna News

'ಅವರನ್ನು ಬಂಧಿಸಿ, ಅವರದೇ ಭಾಷೆಯಲ್ಲಿ ತಕ್ಕ ಪಾಠ ಕಲಿಸಿ'; ರಾಜಕೀಯ ನಾಯಕರಿಂದ ಗಲಭೆ ಖಂಡನೆ

ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ವರದಿ ಮಾಡಲು ಹೋಗಿದ್ದಾಗ ಸುವರ್ಣ ನ್ಯೂಸ್ ವರದಿಗಾರರ ಮೇಲೆ ನಡೆದ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಉದ್ರಿಕ್ತ ಗುಂಪನ್ನು ಬಂಧಿಸಿ, ಅವರದೇ ಭಾಷೆಯಲ್ಲಿ ತಕ್ಕ ಪಾಠ ಕಲಿಸಿ' ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್, ಎ.ಎಸ್ ಪಾಟೀಲ್ ನಡಹಳ್ಳಿ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಸೇರಿದಂತೆ ಸಾಕಷ್ಟು ಮಂದಿ ಖಂಡಿಸಿದ್ದಾರೆ. 
 

ಬೆಂಗಳೂರು (ಆ. 12): ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ವರದಿ ಮಾಡಲು ಹೋಗಿದ್ದಾಗ ಸುವರ್ಣ ನ್ಯೂಸ್ ವರದಿಗಾರರ ಮೇಲೆ ನಡೆದ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 

ಉದ್ರಿಕ್ತ ಗುಂಪನ್ನು ಬಂಧಿಸಿ, ಅವರದೇ ಭಾಷೆಯಲ್ಲಿ ತಕ್ಕ ಪಾಠ ಕಲಿಸಿ' ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್, ಎ.ಎಸ್ ಪಾಟೀಲ್ ನಡಹಳ್ಳಿ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಸೇರಿದಂತೆ ಸಾಕಷ್ಟು ಮಂದಿ ಖಂಡಿಸಿದ್ದಾರೆ. 

'ಮಾಧ್ಯಮಗಳ ಮೇಲೆ ಹಲ್ಲೆ ನಡೆಸಿರುವ ಸರ್ವಥಾ ಸರಿಯಲ್ಲ. ಉದ್ರಿಕ್ತರ ಗುಂಪು ಯಾವ ಮಟ್ಟಕ್ಕೆ ಹೋಗುವುದಕ್ಕಾದರೂ ಸಿದ್ದರಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು' ಎಂದು ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. 

ಬೆಂಗಳೂರು ಗಲಭೆ: ಸುವರ್ಣ ನ್ಯೂಸ್ ಪ್ರತಿನಿಧಿ ಮೇಲೆ ಹಲ್ಲೆ, ಕಾರು ಜಖಂ, ಕ್ಯಾಮೆರಾ ಪುಡಿಪುಡಿ