ಬೆಂಗಳೂರು ಗಲಭೆ: ಸುವರ್ಣ ನ್ಯೂಸ್ ಪ್ರತಿನಿಧಿ ಮೇಲೆ ಹಲ್ಲೆ, ಕಾರು ಜಖಂ, ಕ್ಯಾಮೆರಾ ಪುಡಿಪುಡಿ

ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಉದ್ರಿಕ್ತ ಗುಂಪೊಂದು ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 12): ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಉದ್ರಿಕ್ತ ಗುಂಪೊಂದು ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದೆ. 
ಸಿಕ್ಕ ಸಿಕ್ಕ ವಾಹನಗಳು, ಮನೆ-ಮಳಿಗೆಗಳಿಗೆ ಬೆಂಕಿ ಹಚ್ಚಿದೆ. ಶಾಸಕರ ಮನೆ ಹಾಗೂ ಪಕ್ಕದ ಮನೆ ಭಸ್ಮವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು ಇಬ್ಬರು ಸಾವನ್ನಪ್ಪಿದ್ಧಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಥಳದಿಂದ ವರದಿ ಮಾಡುತ್ತಿದ್ದಾಗ ಸುವರ್ಣ ನ್ಯೂಸ್ ಪ್ರತಿನಿಧಿ ಪ್ರದೀಪ್, ರವಿ ಮೇಲೆ ಪುಂಡರ ಗುಂಪು ಹಲ್ಲೆ ಮಾಡಿದೆ. ಕ್ಯಾಮೆರಾವನ್ನು ಒಡೆದು ಹಾಕಿದೆ. ಸುವರ್ಣ ನ್ಯೂಸ್ ಆಫೀಸ್ ಕ್ಯಾಬ್‌ ಮೇಲೆ ಕಲ್ಲು ತೂರಾಡಿದ್ದಾರೆ. ಏಕಾಏಕಿ ಪೊಲೀಸ್ ಸ್ಟೇಷನ್, ಪೊಲೀಸ್ ಕ್ವಾಟ್ರಸ್ ಮೇಲೂ ದಾಂಧಲೆ ನಡೆಸಿದ್ದಾರೆ. ನಿನ್ನೆ ಏನೇನು ನಡೆಯಿತು? ಎಂಬುದರ ಬಗ್ಗೆ ಒಂದು ಟೈಂ ಲೈನ್ ಇಲ್ಲಿದೆ ನೋಡಿ..!

ಪೈಗಂಬರ್ ಅವಹೇಳನ ಆರೋಪ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯ?

Related Video