ರಾಜಧಾನಿಯಲ್ಲಿ ರೌಡಿಸಂ ಹುಟ್ಟಡಗಿಸಲು ಖಾಕಿ ಸಜ್ಜು: ಪುಡಿ ರೌಡಿಗಳ ಮಟ್ಟಹಾಕುವಂತೆ ಕಮಿಷನರ್ ವಾರ್ನ್ !

ರೌಡಿಶೀಟರ್ ಸಿದ್ದಾಪುರ ಮಹೇಶನ ಕೊಲೆಯಾದ ಬಳಿಕ ಬೆಂಗಳೂರಿನಲ್ಲಿ ಮತ್ತೆ ರೌಡಿ ಆ್ಯಕ್ಟಿವಿಟಿ ಜಾಸ್ತಿಯಾಗಿರೊ ರೀತಿ ಕಾಣ್ತಾಯಿದೆ. ರಸ್ತೆಯಲ್ಲಿ ಕಿರಿಕ್ ಮಾಡೋ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕೋಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊಸ ತಂತ್ರ ರೂಪಿಸಿದ್ದಾರೆ. 

First Published Aug 14, 2023, 9:59 AM IST | Last Updated Aug 14, 2023, 9:59 AM IST

ರಾಜಧಾನಿ ಬೆಂಗಳೂರಲ್ಲಿ ಮತ್ತೆ ರೌಡಿಗಳ ಸಾಮ್ರಾಜ್ಯ ಸೃಷ್ಟಿಯಾಗ್ತಿದೆ. ರೌಡಿಗಳ(Rowdies) ಗ್ಯಾಂಗ್‌ವಾರ್ ಮರು ಜನ್ಮ ತಾಳ್ತಿದೆ. ಕೆಲವರು ಹವಾ ಕ್ರಿಯೇಟ್ ಮಾಡೋಕೆ  ಮಾರಕಾಸ್ತ್ರ ಬೀಸಿದ್ರೆ, ಇನ್ನು ಕೆಲವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳೋಕೆ, ವಿರೋಧಿ ಗ್ಯಾಂಗ್‌ನ ತಲೆ ಉರುಳಿಸೋ ಕೆಲಸ ಮಾಡ್ತಿದ್ದಾರೆ. ಸಿದ್ದಾಪುರ ಮಹೇಶ, ಮಡಿವಾಳ ಕಪಿಲನ ಕೊಲೆಯೇ ಇದಕ್ಕೆ ತಾಜಾ ಸಾಕ್ಷಿ. ಹೀಗಾಗಿ ಬಾಲ ಬಿಚ್ಚಿದ ರೌಡಿಗಳ ಹೆಡೆಮುರಿಕಟ್ಟೋಕೆ ಈಗ ಪೊಲೀಸರು(police) ಅಖಾಡಕ್ಕಿಳಿದಿದ್ದಾರೆ. ರೌಡಿಸಂ ಕಂಟ್ರೋಲ್‌ಗೆ ಡಿಸಿಪಿಗಳ ಮ್ಯಾರಥಾನ್ ಮೀಟಿಂಗ್ ಮಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್. ನಗರದಲ್ಲಿ ರೌಡಿಗಳ ಆ್ಯಕ್ಟಿವಿಟಿ ಮಟ್ಟಹಾಕಲು ಖಡಕ್ ವಾರ್ನ್ ಮಾಡಿದ್ದಾರೆ. ಪ್ರತಿಯೊಬ್ಬರ ಮೇಲೂ ಕಣ್ಣಿಟ್ಟು, ಬಾಲ ಬಿಚ್ಚಿದವರ ಮೇಲೆ CRPC 110 ಅಡಿ ಬಾಂಡ್ ಬರೆಸಿಕೊಳ್ಳುವಂತೆ ಸೂಚಿಸಿದ್ದಾರೆ. ಜೈಲಿನಲ್ಲಿರುವ ರೌಡಿಗಳ ಚಲನವಲನದ ಮೇಲೂ ನಿಗಾ ಇರಿಸುವಂತೆ ಸೂಚಿಸಿದ್ದಾರೆ. ಮಹೇಶ್‌ನ ಹತ್ಯೆ(Mahesh murder) ಸೇಡಿಗಾಗಿ ಕಾಯುತ್ತಿರುವವ ನಾಗನ ವಿರೋಧಿ ಪಡೆ ಎಲ್ಲಿದೆ. ಸೈಲೆಂಟ್ ಸುನೀಲಾ, ವಿಲ್ಸನ್ ಗಾರ್ಡನ್ ನಾಗನ ಜತೆ ಯಾರ್ಯಾರು ಸಂಪರ್ಕದಲ್ಲಿದ್ದಾರೆಂದು ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ. ಒಂದೆಡೆ ರೌಡಿ ಶೀಟರ್‌ಗಳ ಉಪಟಳವಾದ್ರೆ. ಇನ್ನೊಂದೆಡೆ ರೋಡ್ ರೇಜ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗ್ತಿವೆ. ಪುಂಡರು ರಸ್ತೆಯಲ್ಲಿ ಹೋಗ್ತಿರೊ ಅಮಾಯಕರ ಮೇಲೆ ಎಗರಿ ಬೀಳ್ತಿದ್ದಾರೆ. ಇನ್ಮುಂದೆ ಇಂಥವರ ವಿರುದ್ಧವೂ ರೌಡಿ ಶೀಟ್ ಓಪನ್ ಆಗೋದು ಫಿಕ್ಸ್. ವಿನಾಕಾರಣ ರಸ್ತೆಗಳಲ್ಲಿ ಅಮಾಯಕರಿಗೆ ತೊಂದರೆ ಕೊಟ್ಟರೆ, ಪುಂಡಾಟ ಮೆರೆದರೆ ರೌಡಿಶೀಟರ್ ತೆರೆಯುವಂತೆ ನಗರ ಪೊಲೀಸ್ ಆಯುಕ್ತರು ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಬ್ಯಾನ್ ಆದ್ರೂ ಇನ್ನೂ ಬುದ್ಧಿ ಕಲಿಯದ PFI: ಸ್ಲೀಪರ್ ಸೆಲ್‌ಗಳ ಮೂಲಕ ಆ್ಯಕ್ಟಿವ್..!