ಬ್ಯಾನ್ ಆದ್ರೂ ಇನ್ನೂ ಬುದ್ಧಿ ಕಲಿಯದ PFI: ಸ್ಲೀಪರ್ ಸೆಲ್‌ಗಳ ಮೂಲಕ ಆ್ಯಕ್ಟಿವ್..!
ಪಿಎಫ್ಐ ಬ್ಯಾನ್ ಆದ್ರೂ ಇನ್ನೂ ಬುದ್ದಿ ಬಂದಿಲ್ಲ. ಇನ್ನೂ ಅಲ್ಲಲ್ಲಿ ಬೇರು ಬಿಟ್ಟಿರುವ PFIನನ್ನ ಮಟ್ಟಹಾಕಲು NIA ಫಿಲ್ಡ್‌ಗೆ ಇಳಿದಿದೆ. ನಿನ್ನೆ ಒಂದೇ ದಿನ 5 ರಾಜ್ಯ ಹಾಗೂ 14 ಕಡೆ ರೈಡ್ ಮಾಡಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದ್ಯಕ್ಕೆ ನಿಷೇಧಿತ ಸಂಘಟನೆ. ದೇಶದಲ್ಲಿನ ಹಿಂಸಾ ಕೃತ್ಯಗಳು. ಬಾಂಬ್ ಬ್ಲಾಸ್ಟ್‌ಗಳಿಗೆ(bomb blast)ಬೆಂಗಾವಲಾಗಿ ನಿಂತಿದ್ದ ಪಿಎಫ್ಐಗೆ(PFI) ದೇಶದಲ್ಲಿ 5 ವರ್ಷ ಬ್ಯಾನ್ ಮುದ್ರೆ ಒತ್ತಲಾಗಿದೆ. ಆದ್ರೆ ಈ ಪಿಎಫ್ಐ ಸಂಘಟನೆ ನಿಷೇಧವಾದ್ರೂ ಇನ್ನೂ ಇದರ ಬೇರುಗಳು ಮಾತ್ರ ಸಂಪೂರ್ಣವಾಗಿ ನಾಶವಾಗಿಲ್ಲ. ಒಂದಷ್ಟು ಸ್ಲೀಪರ್ ಸೆಲ್‌ಗಳು ಇನ್ನು ಆ್ಯಕ್ಟೀವ್ ಆಗಿವೆ. ಈ PFI ಜಾಲವನ್ನ ಕಿತ್ತೊಗೆಯಲು NIA ಫೀಲ್ಡ್ಗೆ ಇಳಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಸೇರಿದಂತೆ ದೇಶದ 14 ಕಡೆಗಳಲ್ಲಿ ಭಾನುವಾರ NIA ದಾಳಿ ನಡೆಸಿದೆ. ಮಂಗಳೂರಿನಲ್ಲಿ PFI ಅಲ್ಲಲ್ಲಿ ತನ್ನ ಜಾಲ ಉಳಿಸಿಕೊಂಡಿದೆ. ಆದ್ರಿಂದ ಉಳ್ಳಾಲದ ಕಿನ್ಯಾ , ಒಳಚ್ಚಿಲ್ ಪದವು ಮತ್ತು ಪಾಣೆಮಂಗಳೂರಿನ ಮೆಲ್ಕಾರ್ನಲ್ಲಿ NIA ದಾಳಿ ನಡೆದಿದೆ. PFI ನೆಟ್ವರ್ಕ್ ತಲಾಷ್ ಗಿಳಿದಿರುವ NIA ಮೆಲ್ಕಾರ್ ನ ಇಬ್ರಾಹಿಂ ಎಂಬುವರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೇರಳದಲ್ಲಿ(Kerala) ಧಾರ್ಮಿಕ ಶಿಕ್ಷಕನಾಗಿರುವ ಇಬ್ರಾಹಿಂ, ಪಿಎಫ್ಐ ನಿಷೇಧದ ಬಳಿಕ ತಲೆ ಮರೆಸಿಕೊಂಡಿದ್ದ. ಇಬ್ರಾಹಿಂ ಮನೆಯಲ್ಲಿ ಪರಿಶೀಲಿಸಿ ಕೆಲ ದಾಖಲೆಗಳು ಸಿಕ್ಕಿದ್ದು, ಪಿಎಫ್ಐ ಫಂಡಿಂಗ್ ನೆಟ್ವರ್ಕ್‌ಗೆ ಇಬ್ರಾಹಿಂ ಲಿಂಕ್ ಇರೋದು ಗೊತ್ತಾಗಿದೆ. ಅಲ್ದೇ, ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆಯಾಗಿದೆ.
ಇದನ್ನೂ ವೀಕ್ಷಿಸಿ: 76ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿದೆ ಭಾರತ..! ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಮೋದಿ ಕರೆ