ಹಳ್ಳ ಹಿಡಿದ ಬಿಜೆಪಿ ಸರ್ಕಾರದ ಯೋಜನೆ: ತುಕ್ಕು ಹಿಡಿದ ‘ಪಶು ಸಂಜೀವಿನಿ’ ಆ್ಯಂಬುಲೆನ್ಸ್ !
ಬಿಜೆಪಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಟ್ಟಂತೆ ಕಾಣುತ್ತಿದೆ. ಹಸುಗಳ ರಕ್ಷಣೆಗಾಗಿ ಪಶು ಸಂಜೀವಿನಿ ಆ್ಯಂಬುಲೆನ್ಸ್ ಯೋಜನೆ ಈಗ ಹಳ್ಳ ಹಿಡಿದೆ. ಬಳ್ಳಾರಿ ಆಸ್ಪತ್ರೆಗಳ ಮುಂದೆ ಆ್ಯಂಬುಲೆನ್ಸ್ ತುಕ್ಕು ಹಿಡಿಯುತ್ತಿದಿದ್,ದು ಕೊಟ್ಯಾಂತರ ರೂಪಾಯಿ ಮಣ್ಣುಪಾಲಾಗಿದೆ.
ಬಿಜೆಪಿ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಪಶು ಸಂಜೀವಿನಿ ಆ್ಯಂಬುಲೆನ್ಸ್ (Pashu Sanjeevini Ambulance)ಕೂಡ ಒಂದು..ಹಿಂದೆ ಸಚಿವರಾಗಿದ್ದ ಪ್ರಭು ಚಾವ್ಹಾಣ್ ಕನಸಿನ ಕೂಸು ಈಗ ಹಳ್ಳ ಹಿಡಿದಿದೆ. ಮನುಷ್ಯರಂತೆ ಪ್ರಾಣಿಗಳು ಆರೋಗ್ಯದ ಸಮಸ್ಯೆಯಾದ್ರೆ ಸಹಾಯವಾಗಲಿ ಬಿಜೆಪಿ(BJP) ಅವಧಿಯಲ್ಲಿ ಪಶು ಸಂಜೀವಿನಿ ಯೋಜನೆ(Pashu Sanjeevini Yojana) ಜಾರಿಗೊಳಿಸಲಾಗಿತ್ತು. ಏಕಕಾಲದಲ್ಲಿ 275 ಆ್ಯಂಬುಲೆನ್ಸ್‌ಗೆ ಚಾಲನೆ ನೀಡಲಾಗಿತ್ತು. ಆದ್ರೆ ಈ ಯೋಜನೆಗೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಟ್ಟಂತೆ ಕಾಣುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದೇ ಬಳ್ಳಾರಿಯ ಪಶುಸಂಗೋಪನೆ ಆಸ್ಪತ್ರೆ ಮುಂದೆ ಆ್ಯಂಬುಲೆನ್ಸ್‌ಗಳು ತುಕ್ಕು ಹಿಡಿಯುತ್ತಿವೆ. ಪಶು ಸಂಗೋಪನಾ ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಲು ಈ ಯೋಜನೆ ಘೋಷಿಸಲಾಗಿತ್ತು. 108 ಆ್ಯಂಬುಲೆನ್ಸ್ ಮಾದರಿಯಲ್ಲೇ ಹಸುಗಳಿಗೆ ತಕ್ಷಣ ಚಿಕಿತ್ಸೆ ಕೊಡಿಸಬೇಕು ಅಂತಾ ಪ್ರತಿ ಜಿಲ್ಲೆಗೆ ಈ ಯೋಜನೆ ಜಾರಿಗೊಳಿಸಿತ್ತು.ಅಲ್ದೆ ಇದರ ನಿರ್ವಹಣೆಯನ್ನ ಖಾಸಗಿ ಏಜೆನ್ಸಿಗೆ ನೀಡಿತ್ತು. ಆದ್ರೆ ಸರ್ಕಾರ, ಏಜೆನ್ಸಿ ಮುಂದೆ ಹೊಂದಾಣಿಕೆ ಕೊರತೆಯಿಂದ ಬಹುತೇಕ ಆ್ಯಂಬುಲೆನ್ಸ್‌ಗಳು ಮೊಲೆ ಗುಂಪಾಗಿವೆ.
ಇದನ್ನೂ ವೀಕ್ಷಿಸಿ: ಯಾದಗಿರಿ ನಗರಸಭೆಯಲ್ಲಿ ಭಾರೀ ಗೋಲ್ಮಾಲ್ ಆರೋಪ: ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ !