ಯಾದಗಿರಿ ನಗರಸಭೆಯಲ್ಲಿ ಭಾರೀ ಗೋಲ್ಮಾಲ್ ಆರೋಪ: ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ !

ಸರ್ಕಾರದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ  ಖಾತಾ 
ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಿ ಅಕ್ರಮವಾಗಿ ಹಂಚಿಕೆ
ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ
ಸರ್ಕಾರದ ಬೊಕ್ಕಸಕ್ಕೆ ಬರೊಬ್ಬರಿ 18.12 ಕೋಟಿ ನಷ್ಟ

Share this Video

ಯಾದಗಿರಿ ನಗರಸಭೆಯಲ್ಲಿ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದೆ. ನಗರಸಭೆಯ ಪೌರಾಯುಕ್ತರಾಗಿ ಸಂಗಪ್ಪ ಉಫಾಸೆ ಬಂದ ಮೇಲೆ ಸಾಲು ಸಾಲು ಅಕ್ರಮಗಳನ್ನು(illegal) ಬಯಲಿಗೆಳೆದಿದ್ದಾರೆ. ಸರ್ಕಾರಿ ಅಧಿಕಾರಿಗಳ ಕುತಂತ್ರದಿಂದಲೇ ನಡೆದಿದ್ದ ಅಕ್ರಮಗಳನ್ನು ಬಯಲಿಗೆಳೆಯುತ್ತಿರುವ ಪೌರಾಯುಕ್ತ ಸಂಗಪ್ಪ ಉಫಾಸೆಗೆ ಈಗ ಜೀವ ಬೆದರಿಕೆ( life threat call) ಶುರುವಾಗಿದೆ. ಯಾದಗಿರಿ ನಗರಸಭೆಯ(Municipality) ಸುತ್ತಮುತ್ತ ಅನಾಮಿಕ ವ್ಯಕ್ತಿಗಳು ಓಡಾಟ ಮಾಡುವುದು, ರಾತ್ರಿ ವೇಳೆ ಅನಧಿಕೃತ ವ್ಯಕ್ತಿಗಳು ಫೋನ್ ಕರೆ ಮಾಡಿ ಬೆದರಿಕೆ ಹಾಕುವುದು. ಜೊತೆಗೆ ತೇಜೋವಧೆ  ಮಾಡಲು ಜನಾಂಗೀಯ ನಿಂಧನೆ ಕೇಸ್ಗಳನ್ನು ಹಾಕುವ ಪ್ರಯತ್ನವು ನಡೆದಿದೆ ಎನ್ನುತ್ತಿದ್ದಾರೆ ಪೌರಾಯುಕ್ತ ಸಂಗಪ್ಪ. ಈ ರೀತಿಯ ಸಾಲು ಸಾಲು ಅಕ್ರಮ ಎಸೆಗಿದ ಅಧಿಕಾರಿಗಳು ಹಾಗೂ ಲೂಟಿಕೋರರ ಪಾಲಿಗೆ ಸಂಗಪ್ಪ ಉಫಾಸೆ ಸಿಂಹಸ್ವಪ್ನರಾಗಿದ್ದಾರೆ. ಹೀಗಾಗಿ ಜೀವ ಬೆದರಿಕೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ರಾಯರ ಆರಾಧನಾ ಮಹೋತ್ಸವಕ್ಕೆ ಕೌಂಟ್‌ಡೌನ್‌: ಈ ಬಾರಿ ಭಕ್ತರಿಗೆ ಪುಣ್ಯ ಸ್ನಾನದ್ದೇ ಟೆನ್ಷನ್ !

Related Video