Asianet Suvarna News Asianet Suvarna News

6 ತಿಂಗಳ ಮೊದಲೇ ಶಾಲಾ ದಾಖಲಾತಿ ಪ್ರಕ್ರಿಯೆ ಶುರು: 1ನೇ ತರಗತಿಗೆ ಸೇರಿಸೋಕೆ 6 ವರ್ಷ ಆಗಿರಲೇಬೇಕಾ..?

ಮುಂದಿನ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಇನ್ನೂ ಅರ್ಧ ವರ್ಷ ಬಾಕಿ ಇದೆ. ಆಗಲೇ ಕೆಲ ಶಾಲೆಗಳಲ್ಲಿ 2024-25ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆದ್ರೆ, ಒಂದನೇ ತರಗತಿಗೆ ಮಕ್ಕಳನ್ನ ಸೇರಿಸಲು ಪೋಷಕರಿಗೆ ಗೊಂದಲ ಶುರುವಾಗಿದೆ. 
 

2023-24ನೇ ಸಾಲಿನ ಶೈಕ್ಷಣಿಕ ವರ್ಷದ ಮಧ್ಯದಲ್ಲಿದ್ದೇವೆ. ಆಗಲೇ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ(enrollment process) ಶುರುವಾಗಿದೆ. 6 ತಿಂಗಳು ಬಾಕಿ ಇರುವಾಗಲೇ ಕೆಲ ಖಾಸಗಿ ಶಾಲೆಗಳು(Schools) ಅಡ್ಮಿಷನ್ ಓಪನ್ ಮಾಡಿವೆ. ಆದ್ರೆ, ಪೋಷಕರಿಗೆ ಎನ್ಇಪಿ-ಎಸ್ಇಪಿ(NEP-SEP)  ಗೊಂದಲ ಶುರುವಾಗಿದೆ. 2023-24ನೇ ಸಾಲಿನಲ್ಲಿ NEP ಅಡಿ 6 ವರ್ಷ ತುಂಬಿದ ಮಕ್ಕಳನ್ನ ಮಾತ್ರ 1ನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗಿದೆ. ಆದ್ರೆ ಕಾಂಗ್ರೆಸ್(Congress) ಇದನ್ನು ರದ್ದು ಪಡಿಸಿದ್ದು, ಎಸ್ಇಪಿ ಶಿಕ್ಷಣ ಪದ್ಧತಿಯನ್ನೆ ಅನುಸರಿಸೋದಾಗಿ ಹೇಳಿದೆ. ಆದ್ರೆ, ಇದುವರೆಗೂ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ. ಹೀಗಾಗಿ ತಮ್ಮ ಮಗುವನ್ನು 1ನೇ ತರಗತಿಗೆ ಸೇರಿಸೋಕೆ 6 ವರ್ಷ ಆಗಿರಬೇಕಾ..? ಅಥವಾ 5 ವರ್ಷ ಆಗಿದ್ರೆ ಸಾಕಾ..? ಅನ್ನೋ ಗೊಂದಲ ಪೋಷಕರದ್ದು. ಪೋಷಕರು ತಮ್ಮ ಗೊಂದಲ ಪರಿಹರಿಸಿಕೊಳ್ಳಲು ಶಾಲೆಗಳಿಗೆ ಕರೆ ಮಾಡಿ  ವಿಚಾರಿಸುತ್ತಿದ್ದಾರೆ. ಆದ್ರೆ ಖಾಸಗಿ ಶಾಲೆಗಳಿಗೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಕೂಡಲೇ ಶಿಕ್ಷಣ ಇಲಾಖೆ ಈ ಗೊಂದಲವನ್ನ ಪರಿಹರಿಸಬೇಕೆಂದು ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ. NEP ರದ್ದು ಮಾಡಿರುವ ರಾಜ್ಯ ಸರ್ಕಾರ, ಮಕ್ಕಳ ದಾಖಲಾತಿಗೆ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ಮಾತ್ರ ಇನ್ನೂ ಸ್ಪಷ್ಟನೆ ನೀಡಿಲ್ಲ. ಆದಷ್ಟು ಬೇಗ ಶಿಕ್ಷಣ ಇಲಾಖೆ ಈ ಗೊಂದಲಕ್ಕೆ ತೆರೆ ಎಳೆಯಲಿ ಎಂದು ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಈ ಬಾರಿ ವಿಶ್ವವಿಖ್ಯಾತ ದಸರಾಗೆ ಏರ್‌ ಶೋ ಮೆರಗು: ಬಾನಂಗಳದಲ್ಲಿ ಮೂಡಲಿದೆ ಲೋಹದ ಹಕ್ಕಿಗಳ ಚಿತ್ತಾರ

Video Top Stories