ಈ ಬಾರಿ ವಿಶ್ವವಿಖ್ಯಾತ ದಸರಾಗೆ ಏರ್‌ ಶೋ ಮೆರಗು: ಬಾನಂಗಳದಲ್ಲಿ ಮೂಡಲಿದೆ ಲೋಹದ ಹಕ್ಕಿಗಳ ಚಿತ್ತಾರ

ವಿಶ್ವವಿಖ್ಯಾತ ದಸರಾಗೆ ದಿನಗಣಗೆ ಶುರುವಾಗಿದೆ. ಬರಗಾಲದ ಮಧ್ಯೆ ಸಾಂಸ್ಕೃತಿಕ ನಗರಿ ಕಂಗೊಳಿಸ್ತಿದೆ. ಇದ್ರ ಮಧ್ಯೆ ಕೇಂದ್ರದ ಅದೊಂದು ನಿರ್ಧಾರ ದಸರಾ ಹಬ್ಬದ ಖುಷಿ ಹೆಚ್ಚುವಂತೆ ಮಾಡಿದೆ.

Share this Video
  • FB
  • Linkdin
  • Whatsapp

ಜಂಬೂ ಸವಾರಿ..ಚಿನ್ನದ ಅಂಬಾರಿ..ರಾಜ ಬೀದಿಯಲ್ಲಿ ಗಜಪಡೆ ಗಾಂಭೀರ್ಯ ನಡೆ.. ಇದು ಸಾಂಸ್ಕೃತಿಕ ನಗರಿಯ ದಸರಾ ವೈಭವ.. ವಿಶ್ವ ವಿಖ್ಯಾತಿ ದಸರಾ ಮಹೋತ್ಸವ ಈ ಬಾರಿ ಮತ್ತಷ್ಟು ಮೆರಗು ಹೆಚ್ಚಲಿದೆ. ಯಾಕಂದ್ರೆ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಮೈಸೂರು(Mysore) ದಸರಾದಲ್ಲಿ ಏರ್ ಶೋ ಆಯೋಜಿಸಲಾಗ್ತಿದೆ. ಮೈಸೂರು ದಸರಾದಲ್ಲಿ ಏರ್ ಶೊ ಆಯೋಜಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಕೊನೆಗೂ ದಸರಾ(Dasara) ವೈಭವದ ಜೊತೆಗೆ ಏರ್ ಶೋ ಕಣ್ತುಂಬಿಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ಕರುಣಿಸಿದೆ. ಏರ್ ಶೋಗೆ ಪರ್ಮಿಷನ್ ಸಿಕ್ಕಿದ್ದೇ ತಡ ಸಿದ್ದತೆ ಜೋರಾಗಿದೆ. ಮೈಸೂರು ಏರ್ ಬೇಸ್ಡ್ ಕ್ಯಾಪ್ಟನ್ ಡಿ.ಕೆ‌.ಹೋಜಾ ಜೊತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮೈಸೂರಿನ ಬನ್ನಿ ಮಂಟಪ ಮೈದಾನಕ್ಕೆ ಎಂಟ್ರಿ ಕೊಟ್ಟು, ಏರ್ ಶೋ(Air show) ನಡೆಸಲು ಸ್ಥಳ ಪರಿಶೀಲನೆ ನಡೆಸಿದ್ರು. ರಾಜಮನೆತನದ ದಸರಾ ಜೆಸ್ಟ್ ಫೋಟೋದಲ್ಲಿ ನೊಡ್ತಿದ್ವಿ. ಆದ್ರೆ, ಈ ಬಾರಿ 400 ವರ್ಷಗಳ ರಾಜ ಪರಂಪರೆಯ ದಸರಾ ವೈಭವದಂತೆ ನಡೆಸಲು ಭರ್ಜರಿ ತಯಾರಿ ನಡೆದಿದೆ. ವರ್ಷಗಳು ಉರುಳಿದಂತೆ ರಾಜರ ಅಳ್ವಿಕೆ ಕಾಲದ ಜಂಬೂ ಸವಾರಿ ಕೊಂಚ ಬದಲಾವಣೆ ಕಂಡಿತ್ತು.. ಆದ್ರೀಗ ಮತ್ತೆ 4 ಶತಮಾನದಲ್ಲಿ ಜಂಬುಸವಾರಿ ಜತೆ ರಾಜ ಬಿರುದು ಲಾಂಛನ ಹೊತ್ತು ಸಾಗುತ್ತಿದ್ದ ಸೈನಿಕರು, ಗ್ರಿಲ್ ಮೀಸಿ, ರೆಡ್ ಲ್ಯಾನ್ಸರ್, ವೈಟ್ ಲ್ಯಾನ್ಸರ್, ಗ್ರೀನ್ ಲ್ಯಾನ್ಸರ್ ಇವರೆಲ್ಲ ಪಾಲ್ಗೊಳ್ಳುವ ಮೂಲಕ ಇತಿಹಾಸ ಕಣ್ಮುಂದೆ ತರಲು ಸಿದ್ದತೆ ನಡೆಸಲಾಗಿದೆ.

ಇದನ್ನೂ ವೀಕ್ಷಿಸಿ:  ರಿಲೀಸ್ ಆಯ್ತು ‘ಲಿಯೋ’ ಟ್ರೈಲರ್‌: ಥಿಯೇಟರ್‌ನಲ್ಲಿ ಪುಂಡಾಟ ಮೆರೆದ ವಿಜಯ್ ಫ್ಯಾನ್ಸ್

Related Video