ಎಲ್ಲ ಭಾಷೆಗಳೂ ಭಾರತೀಯತೆಯ ಆತ್ಮ, ಮೋದಿ ಹೇಳಿಕೆ ಸ್ವಾಗತಿಸಿದ ಕಿಚ್ಚ ಸುದೀಪ್!
ಇತ್ತೀಚೆಗೆ ಕೇಂದ್ರ ಸರ್ಕಾರವು ‘ಹಿಂದಿ ಹೇರಿಕೆ’ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಬಗ್ಗೆ ಮೌನ ಮುರಿದಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ‘ಹಿಂದಿ ಹೇರಿಕೆ’ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಬಗ್ಗೆ ಮೌನ ಮುರಿದಿದ್ದಾರೆ. ‘ಭಾಷೆಯ ಆಧಾರದಲ್ಲಿ ಇಂದು ವಿವಾದ ಹುಟ್ಟಿಸುವ ಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕು. ಬಿಜೆಪಿ (BJP)ಎಲ್ಲ ಭಾರತೀಯ ಭಾಷೆಗಳನ್ನು ‘ಭಾರತೀಯತೆಯ ಆತ್ಮ’ ಎಂದು ಪರಿಗಣಿಸುತ್ತದೆ’ ಎಂದಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಆರೋಪ ಮಾಡುತ್ತಿರುವ ಪಕ್ಷಗಳು ಹಾಗೂ ವ್ಯಕ್ತಿಗಳಿಗೆ ತಿರುಗೇಟು ನೀಡಿದ್ದಾರೆ. ಭಾಷಾ ಸಾಮರಸ್ಯ ಕುರಿತಾದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ಅಜಯ್ ದೇವಗನ್-ಸುದೀಪ್ ಮಧ್ಯೆ ಹಿಂದಿ ವಿವಾದ ಉಂಟಾಗಿದ್ಹೇಗೆ..?
‘ಪ್ರಧಾನಿ ನರೇಂದ್ರ ಮೋದಿ ಎಲ್ಲ ಭಾಷೆಗಳೂ ಭಾರತೀಯತೆಯ ಆತ್ಮ ಎಂದಿದ್ದು ಸ್ವಾಗತಾರ್ಹ’ ಎಂದು ಹೇಳಿದರು. ಇದೇ ವೇಳೆ, ‘ಬಾಲಿವುಡ್ ನಟ ಅಜಯ ದೇವಗನ್‌ಗೆ (Ajay Devgan) ನೀಡಿದ್ದ ಪ್ರತಿ ಹೇಳಿಕೆ ಚರ್ಚೆ ಹುಟ್ಟುಹಾಕುವ ಅಥವಾ ದೇಶದಲ್ಲಿ ಭಾಷೆಯ ವಿವಾದವನ್ನು ಸೃಷ್ಟಿಸುವ ಉದ್ದೇಶ ಹೊಂದಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ಆಗ ರಾಜ್, ಈಗ ಸುದೀಪ್: ಹಿಂದಿವಾಲಾಗಳ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಬಿಚ್ಚಿಟ್ಟ ಸತ್ಯ
‘ದೇಶದಲ್ಲಿ ಯಾವುದೇ ಗಲಭೆ ಅಥವಾ ವಿವಾದ ಸೃಷ್ಟಿಸುವ ಉದ್ದೇಶದಿಂದ ನಾನು ಹೇಳಿಕೆ ನೀಡಿರಲಿಲ್ಲ. ಅದು ಅಚಾನಕ್ಕಾಗಿ ಆಗಿದ್ದು, ಟ್ವೀಟಿನಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆಯಷ್ಟೇ. ಪ್ರಧಾನಿಯವರು ಕೂಡಾ ಎಲ್ಲ ಭಾಷೆಗಳನ್ನು ಗೌರವಿಸುವ ಕುರಿತಾದ ಹೇಳಿಕೆ ನೀಡಿದ್ದಾರೆ. ಇದು ಸ್ವಾಗತಾರ್ಹ. ತಮ್ಮ ತಮ್ಮ ಭಾಷೆಯನ್ನು ಗೌರವಿಸುವ ಪ್ರತಿಯೊಬ್ಬರಿಗೂ ಪ್ರಧಾನಿಯವರ ಹೇಳಿಕೆ ಸಂತಸ ನೀಡಿದೆ. ನಾನು ಕೇವಲ ಕನ್ನಡವನ್ನು ಪ್ರತಿನಿಧಿಸುತ್ತಿಲ್ಲ, ಪ್ರಧಾನಿಯವರ ಹೇಳಿಕೆಯಿಂದ ಎಲ್ಲರ ಮಾತೃಭಾಷೆಗೂ ಗೌರವ ಸಿಕ್ಕಂತಾಗಿದೆ. ಮೋದಿಯವರನ್ನು ನಾವು ಕೇವಲ ರಾಜಕಾರಣಿಯಾಗಿ ನೋಡುವುದಿಲ್ಲ, ಒಬ್ಬ ನಾಯಕನಾಗಿಯೂ ನೋಡುತ್ತೇವೆ’ ಎಂದರು.