Asianet Suvarna News Asianet Suvarna News

ಅಜಯ್‌ ದೇವಗನ್ - ಸುದೀಪ್ ಮಧ್ಯೆ ಹಿಂದಿ ವಿವಾದ ಉಂಟಾಗಿದ್ಹೇಗೆ.?

ಕಿಚ್ಚ ಸುದೀಪ್ (Kiccha Sudeep) ಹಾಗೂ ಅಜಯ್ ದೇವಗನ್ (Ajay Devgan) ನಡುವೆ ಟ್ವಿಟ್ ವಾರ್ (Tweet War) ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗಿದ್ರೆ ಅಜಯ್‌ ದೇವಗನ್ ಹಾಗೂ ಸುದೀಪ್ ಮಧ್ಯೆ ಸಮರಕ್ಕೆ ಕಾರಣ ಏನು? ಮೊದಲು ವಿವಾದ ಉಂಟಾಗಿದ್ದು ಹೇಗೆ.? 

ಕಿಚ್ಚ ಸುದೀಪ್ (Kiccha Sudeep) ಹಾಗೂ ಅಜಯ್ ದೇವಗನ್ (Ajay Devgan) ನಡುವೆ ಟ್ವಿಟ್ ವಾರ್ (Tweet War) ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗಿದ್ರೆ ಅಜಯ್‌ ದೇವಗನ್ ಹಾಗೂ ಸುದೀಪ್ ಮಧ್ಯೆ ಸಮರಕ್ಕೆ ಕಾರಣ ಏನು? ಮೊದಲು ವಿವಾದ ಉಂಟಾಗಿದ್ದು ಹೇಗೆ.?

ರಾಷ್ಟ್ರಭಾಷೆ ವಿವಾದ: ಅಜಯ್ ದೇವಗನ್‌ಗೆ ಕಿಚ್ಚನ ಬುದ್ದಿವಂತಿಕೆಯ ಉತ್ತರ

ಅದು ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಐ ಆ್ಯಮ್ ಆರ್’(I Am R) ಸಿನಿಮಾದ ಟೈಟಲ್ ಮತ್ತು ಫಸ್ಟ್ಲುಕ್ ಲಾಂಚ್ ಕಾರ್ಯಕ್ರಮ. ಅದಕ್ಕೆ ಕಿಚ್ಚ ಸುದೀಪ್ ಅವರು ಮುಖ್ಯ ಅಥಿತಿ ಆಗಿದ್ದರು. ಆ ವೇದಿಕೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತು ಪ್ರಸ್ತಾಪ ಆಯಿತು. ಅದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್ ಅವರು, ‘ಕನ್ನಡ ಚಿತ್ರರಂಗದ ಒಂದು ಸಿನಿಮಾವನ್ನು ಪ್ಯಾನ್ ಇಂಡಿಯಾ ಚಿತ್ರ ಅಂತ ಹೇಳಿದ್ದೀರಿ. ಅದಕ್ಕೆ ಒಂದು ಕರೆಕ್ಷನ್ ಇರಲಿ. ಯಾಕೆಂದರೆ ಈಗ ಹಿಂದಿ ರಾಷ್ಟ್ರ ಭಾಷೆ ಅಲ್ಲ. ಹಿಂದಿಯವರು ನಿಜವಾಗಿಯೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಚಿತ್ರವನ್ನು ತಮಿಳು, ತೆಲುಗಿಗೆ ಡಬ್ ಮಾಡಿ ಒದ್ದಾಡುತ್ತಿದ್ದಾರೆ. ಆಗ್ತಾ ಇಲ್ಲ’ ಎಂದು ಸುದೀಪ್ ಹೇಳಿದ್ದರು.

ಸುದೀಪ್ ಅವರ ಮಾತುಗಳು ಹಿಂದಿ ಸೆಲೆಬ್ರಿಟಿಗಳ ಕಿವಿ ತಲುಪುವ ಹೊತ್ತಿಗೆ ಬೇರೆಯದೇ ಸ್ವರೂಪ ಪಡೆದುಕೊಂಡಿತು. ನಟ ಅಜಯ್ ದೇವಗನ್ ಅವರು ಒಂದು ಲಾಜಿಕ್ ಇಲ್ಲದ ಪ್ರಶ್ನೆಯನ್ನು ಎತ್ತಿದರು. ‘ನನ್ನ ಸಹೋದರ ಕಿಚ್ಚ ಸುದೀಪ್ ಅವರೇ.. ನಿಮ್ಮ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ನೀವೇಕೆ ರಿಲೀಸ್ ಮಾಡುತ್ತೀರಿ? ಅಂದು, ಇಂದು ಎಂದೆಂದಿಗೂ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಆಗಿರಲಿದೆ. ಜನ ಗಣ ಮನ’ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದರು. ಅವರ ಈ ಮಾತಿಗೆ ಅನೇಕರಿಂದ ಖಂಡನೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.

 

Video Top Stories