ಅಫ್ಘಾನಿಸ್ತಾನದಲ್ಲಿ ಸಿಲುಕಿರೋ ಎಷ್ಟು ಕನ್ನಡಿಗರ ರಕ್ಷಣೆ ಆಗಿದೆ? ನೋಡಲ್ ಅಧಿಕಾರಿ ಮಾಹಿತಿ
ಅಫ್ಘಾನ್‌ನಲ್ಲಿ ಸಿಲುಕಿರುವ ವಿವಿಧ ರಾಷ್ಟ್ರಗಳ ಪ್ರಜೆಗಳನ್ನು ಆಯಾ ದೇಶ ರಕ್ಷಣೆ ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಣೆ ಮಾಡುವ ಕೆಲಸವನ್ನು ಭಾರತ ಸರ್ಕಾರ ಮತ್ತು ಭಾರತೀಯ ವಾಯುಸೇನೆ ಮಾಡುತ್ತಿದೆ. ಇನ್ನು ಇಲ್ಲಿಯವರೆಗೂ ಎಷ್ಟು ಕನ್ನಡಿಗರನ್ನ ರಕ್ಷಣೆ ಮಾಡಲಾಗಿದೆ? ಈ ಬಗ್ಗೆ ನೋಡಲ್ ಅಧಿಕಾರಿ ಕೊಟ್ಟ ಮಾಹಿತಿ ಹೀಗಿದೆ.
ಬೆಂಗಳೂರು, (ಆ.21): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು, ತಾಲಿಬಾನಿಗಳ ಕೈ ಸಿಕ್ಕ ಅಫ್ಘನ್ನರು ನರಳಾಡುತ್ತಿದ್ದಾರೆ. ಇನ್ನುಳಿದವರು ಬದುಕುಳಿದರೆ ಭಿಕ್ಷೆ ಬೇಡಿಯಾದರೂ ಜೀವನ ಮಾಡುತ್ತೇವೆ ಅಂತಾ ರಾತ್ರೋರಾತ್ರಿ ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ.
ಕಾಬೂಲ್ ಬಿಡಲು ಕಾಯುತ್ತಿರುವ ಭಾರತೀಯರು ಸೇಫ್!