Omicron Variant: ಬೆಂಗ್ಳೂರಲ್ಲಿ ಇಬ್ಬರಿಗೆ ಓಮಿಕ್ರಾನ್ ದೃಢ, ಐವರಿಗೆ ಶಂಕೆ

ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕೊರೋನಾದ ಹೊಸ ತಳಿ ಒಮಿಕ್ರೋನ್‌ (Omicron Variant)  ಸೋಂಕು ಕರ್ನಾಟಕದ ಮೂಲಕವೇ ಭಾರತವನ್ನು ಪ್ರವೇಶಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಇಬ್ಬರಲ್ಲಿ ಒಮಿಕ್ರೋನ್‌ ಸೋಂಕು ದೃಢಪಟ್ಟಿದೆ. 

First Published Dec 3, 2021, 4:47 PM IST | Last Updated Dec 3, 2021, 5:20 PM IST

ಬೆಂಗಳೂರು (ಡಿ. 03): ರಾಜ್ಯದಲ್ಲಿ ಪತ್ತೆಯಾಗಿರುವ ಎರಡೂ ಒಮಿಕ್ರೋನ್‌ (Omicron Case) ಪ್ರಕರಣಗಳು ರಾಜಧಾನಿಯಲ್ಲೇ ಬೆಳಕಿಗೆ ಬಂದಿವೆ. ನ.20 ರಂದು ದಕ್ಷಿಣ ಆಫ್ರಿಕಾದಿಂದ (South Africa) ಆಗಮಿಸಿದ್ದ 66 ವರ್ಷದ ವ್ಯಕ್ತಿ ಹಾಗೂ ಯಾವುದೇ ಪ್ರವಾಸದ ಹಿನ್ನೆಲೆ ಇಲ್ಲದ ಬೆಂಗಳೂರು ಮೂಲದ 46 ವರ್ಷದ ವೈದ್ಯ ಸೇರಿ ಇಬ್ಬರಿಗೆ ಒಮಿಕ್ರೋನ್‌ ಸೋಂಕು ದೃಢಪಟ್ಟಿದೆ. 

Covid 19 Burst: ತುಮಕೂರು ನರ್ಸಿಂಗ್ ಕಾಲೇಜಿನ 5 ಕೇರಳ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು

ಈ ಪೈಕಿ 66 ವರ್ಷದ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರಲ್ಲಿ ಯಾರಿಗೂ ಸೋಂಕು ದೃಢಪಟ್ಟಿಲ್ಲ. ಆದರೆ, ಬೆಂಗಳೂರು ಮೂಲದ 46 ವರ್ಷದ ವೈದ್ಯರ ಪ್ರಾಥಮಿಕ ಸಂಪರ್ಕಿತರಲ್ಲಿ ಮೂವರು ಹಾಗೂ ದ್ವಿತೀಯ ಹಂತದ ಸಂಪರ್ಕಿತರಲ್ಲಿ ಇಬ್ಬರು ಸೇರಿ ಐದು ಮಂದಿ ಸಂಪರ್ಕಿತರಿಗೆ ಸೋಂಕು ದೃಢಪಟ್ಟಿದೆ. ಇದು ತೀವ್ರ ಆತಂಕ ಮೂಡಿಸಿದ್ದು, ಐವರ ರಕ್ತದ ಮಾದರಿಗಳನ್ನೂ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ರವಾನಿಸಲಾಗಿದೆ. ರಾಜ್ಯದಲ್ಲಿ ಒಮಿಕ್ರೋನ್‌ ತಳಿ ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಿದೆ. ಮುನ್ನೆಚ್ಚರಿಕಾ ಕ್ರಮಗಳು, ನಿರ್ಬಂಧಗಳ ಬಗ್ಗೆ ಚರ್ಚೆ ನಡೆಸಿದೆ.