ಶಿವಕುಮಾರ ಶ್ರೀಗಳ 115 ನೇ ಜನ್ಮದಿನ, ಮದುವಣಗಿತ್ತಿಯಂತೆ ಸಿದ್ಧಗೊಂಡಿದೆ ಸಿದ್ಧಗಂಗೆ..!

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವಕ್ಕೆ ಸಿದ್ಧಗಂಗಾ ಮಠ ಸಜ್ಜಾಗಿದೆ. ಎರಡು ವರ್ಷಗಳ ಕಾಲ ಕೊರೋನಾ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಜಯಂತಿಯನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಅದಾದ ಬಳಿಕ ಇದೇ ಮೊದಲ ಬಾರಿಗೆ ಶ್ರೀಗಳ ಜನ್ಮ​ದಿ​ನ​ವ​ನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

Share this Video
  • FB
  • Linkdin
  • Whatsapp

ತುಮಕೂರು (ಏ. 01): ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ (Dr Shivakumara Swamiji) ಅವರ 115ನೇ ಜಯಂತ್ಯುತ್ಸವಕ್ಕೆ (Birth Anniversary) ಸಿದ್ಧಗಂಗಾ ಮಠ ಸಜ್ಜಾಗಿದೆ. 2019ರ ಜನವರಿಯಲ್ಲಿ ಶ್ರೀಗಳು ಲಿಂಗೈಕ್ಯರಾಗಿದ್ದು, ಅದೇ ವರ್ಷ ಏಪ್ರಿಲ್‌ನಲ್ಲಿ ಅವರ ಹುಟ್ಟಿದ ಹಬ್ಬ ಆಚರಣೆಯನ್ನು ಶ್ರೀ ಮಠದ ಆವರಣದಲ್ಲಿ ಮಾಡಲಾಗಿತ್ತು. ಎರಡು ವರ್ಷಗಳ ಕಾಲ ಕೊರೋನಾ (Covid 19) ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಜಯಂತಿಯನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಅದಾದ ಬಳಿಕ ಇದೇ ಮೊದಲ ಬಾರಿಗೆ ಶ್ರೀಗಳ ಜನ್ಮ​ದಿ​ನ​ವ​ನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

News Hour ಹಲಾಲ್ ವಾರ್ ನಡುವೆ ಗಂಡಸ್ತನದ ಗಲಾಟೆ, "ಹಿಂದೂ ಎನ್ನುವ ಶಬ್ದವೇ ಅಪಾಯ" ಎಂದ ಸಾಹಿತಿ ಕುಂವೀ!

ಶ್ರೀಗಳ ಜಯಂತ್ಯೋತ್ಸವಕ್ಕೆ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇದ​ಕ್ಕಾಗಿ ವಸ್ತುಪ್ರದರ್ಶನ ಮೈದಾನದ ಪಕ್ಕ ಬೃಹದಾಕಾರದ ವೇದಿಕೆ ನಿರ್ಮಿಸಲಾಗಿದೆ. ಈ ವೇದಿಕೆ ಮುಂಭಾಗ 10 ಸಾವಿರಕ್ಕೂ ಹೆಚ್ಚು ಮಂದಿಗೆ ಕೂರಲು ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 8 ಕಡೆ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿರುವ ಹಳೇ ಊಟದ ಮನೆ, ಹೊಸ ಊಟದ ಮನೆ, ಪ್ರಾರ್ಥನಾ ಮಂದಿರ, ಕೆಂಪಹೊನ್ನಯ್ಯ ಅತಿಥಿ ಗೃಹ, ಸೌದೆ ಕೊಪ್ಪಲು, ಸಿದ್ದಾರ್ಥ ಅತಿಥಿ ಗೃಹ, ಉದ್ದಾನೇಶ್ವರ ಊಟದ ಮನೆ ಸೇರಿ ಎಂಟು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿಯೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.


Related Video