ನೋ ವ್ಯಾಕ್ಸಿನ್, ನೋ ರೇಷನ್; ರೇಷನ್ ಅಂಗಡಿ ಮಾಲಿಕರ ಯಡವಟ್ಟಿಗೆ ಜನ ಕಂಗಾಲು.!

ಮಳವಳ್ಳಿ ತಾಲೂಕಿನ ಚಿಕ್ಕಮುಲಗೋಡು ಗ್ರಾಮದಲ್ಲಿ ಪಡಿತರ ಪಡೆಯಲು ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. 

First Published Sep 2, 2021, 3:04 PM IST | Last Updated Sep 2, 2021, 3:03 PM IST

ಮಂಡ್ಯ (ಸೆ. 02): ಮಳವಳ್ಳಿ ತಾಲೂಕಿನ ಚಿಕ್ಕಮುಲಗೋಡು ಗ್ರಾಮದಲ್ಲಿ ಪಡಿತರ ಪಡೆಯಲು ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಲಸಿಕೆ ಹಾಕಿಸುವ ಟಾರ್ಗೆಟ್ ನೀಡಿದ್ದಾರೆ ತಹಶೀಲ್ದಾರ್. ಲಸಿಕೆ ಪಡೆದ ಪ್ರಮಾಣ ಪತ್ರ ಇದ್ದರಷ್ಟೇ ಪಡಿತರ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಪಡಿತರ ಸಿಗುತ್ತಿಲ್ಲ ಎಂದು ಜನಸಾಮಾನ್ಯರು ಕಂಗಾಲಾಗಿದ್ದಾರೆ. 

ಹಾಲಿ ಸಚಿವ ಸುನೀಲ್ ಕುಮಾರ್, ನಟಿ ಜಯಮಾಲಾ ಓದಿದ ಕಾಲೇಜಿನ ದುಸ್ಥಿತಿ ನೋಡಿ..!