ಹಾಲಿ ಸಚಿವ ಸುನೀಲ್ ಕುಮಾರ್, ನಟಿ ಜಯಮಾಲಾ ಓದಿದ ಕಾಲೇಜಿನ ದುಸ್ಥಿತಿ ನೋಡಿ..!
- ಹಾಲಿ ಸಚಿವ ಸುನೀಲ್ ಕುಮಾರ್ , ಚಿತ್ರ ನಟಿ ಜಯಮಾಲಾ ಓದಿದ ಕಾಲೇಜ್ ದುಸ್ಥಿತಿ
- 14 ಕೊಠಡಿಗಳು ಬೀಳುವ ಸ್ಥಿತಿ, ಸರ್ಕಾರ, ಜಿಲ್ಲಾಡಳಿತಕ್ಕೆ ಎಷ್ಟೇ ಮನವಿ ಮಾಡಿದ್ರೂ ನೋ ಯೂಸ್
- ಲೋಕೋಪಯೋಗಿ ಇಲಾಖೆಯಿಂದ ತರಗತಿ ನಡೆಸಲು ಯೋಗ್ಯವಿಲ್ಲವೆಂದು ರಿಪೋರ್ಟ್
ಚಿಕ್ಕಮಗಳೂರು (ಸೆ. 02): ಕುಸಿಯುವ ಭೀತಿಯಲ್ಲಿರುವ ಮೇಲ್ಛಾವಣಿ, ಮೇಲ್ಛಾವಣಿಯಿಂದ ಸದಾ ಕಾಲ ಉದುರುವ ಸಿಮೆಂಟ್‌ನ ಚೂರುಗಳು, ಲ್ಯಾಬ್ ನ ಒಳಗೆ ನೀರು... ಇದನ್ನೆಲ್ಲಾ ಕಂಡು ಯಾವುದೋ ಪಾಳು ಬಿದ್ದಿರುವ ಕಟ್ಟಡದ ಬಗ್ಗೆ ಹೇಳುತ್ತಿದ್ದಾರೆ ಅಂತ ಭಾವಿಸಿಕೊಳ್ಳಬೇಡಿ. ಇದು ಮುಂದಿನ ಭವ್ಯ ಭಾರತದ ಪ್ರಜೆಗಳನ್ನು ರೂಪಿಸುವ ಚಿಕ್ಕಮಗಳೂರು ಜಿಲ್ಲೆಯ ಜ್ಞಾನಮಂದಿರವೊಂದರ ದುಸ್ಥಿತಿ.
ಕರ್ನಾಟಕ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಆಕಸ್ಮಿಕ ಸಾವಲ್ಲ, ಕೊಲೆ.?
ನಗರದ ಸೆರಗಂಚಿನಲ್ಲಿರುವ ಲಾಲ್ ಬಹುದ್ದೂರ್ ಶಾಸ್ರ್ತಿ ಪದವಿ ಪೂರ್ವ ಕಾಲೇಜ್ ನ ದುಸ್ಥಿತಿ. ಸರ್ಕಾರಿ ಪದವಿ ಪೂರ್ವ ಕಾಲೇಜಿನ 14 ಕೊಠಡಿಗಳು ಸಂಪೂರ್ಣವಾಗಿ ಶಿಥಲೀಕರಣಗೊಂಡಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ.ಪ್ರಥಮ, ದ್ವಿತೀಯ ಪಿಯುಸಿಯಲ್ಲಿ 150ಕ್ಕೂ ಹೆಚ್ಚು ಮಕ್ಕಳ ವ್ಯಾಸಂಗ ಮಾಡುತ್ತಿದ್ದಾರೆ. ಕಲಾ ,ವಿಜ್ಷಾನ, ವಾಣಿಜ್ಯ ತರಗತಿಗಳು ನಡೆಯುತ್ತಿದ್ದು ಉಪ್ಯಾನಸಕ ವೃಂದದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಕಾಲೇಜಿನ ಕೊಠಡಿಗಳಲ್ಲಿ ಹಾಲಿ ಸಚಿವ ಸುನೀಲ್ ಕುಮಾರ್ ,ಚಿತ್ರ ನಟಿ ಜಯಮಾಲಾ ಕೂಡ ಪಾಠ ಕೇಳಿದ್ದಾರೆ. ಕಾಲೇಜಿನ ದುಸ್ಥಿತಿ ಬಗ್ಗೆ ಇಲ್ಲಿನ ಉಪ್ಯಾನಸಕರು ಸರ್ಕಾರ, ಜಿಲ್ಲಾಡಳಿತಕ್ಕೆ ಎಷ್ಟೇ ಮನವಿ ಮಾಡಿದ್ರೂ ಯಾವುದೇ ಪ್ರಯೋಜವಿಲ್ಲ, ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತರಗತಿ ನಡೆಸಲು ಯೋಗ್ಯವೆಲ್ಲಂದು ರಿಪೋರ್ಟ್ ಕೂಡ ನೀಡಿದ್ದಾರೆ.